ನಮ್ಮದೇ ದನಿಯೆತ್ತಿ ಎಂದೂ ಹಾಡೇವೋ

Author : ಕೆ. ಸರೋಜಾ

Pages 132

₹ 50.00




Year of Publication: 2000
Published by: ಮಹಿಳ ಸಾಹಿತ್ಯಿಕ ವೇದಿಕೆ
Address: ಬೆಂಗಳೂರು

Synopsys

`ನಮ್ಮದೇ ದನಿಯೆತ್ತಿ ಎಂದು ಹಾಡೇವೋ’ಕೆ. ಸರೋಜಾ ಅವರ ಕವನಸಂಕಲನವಾಗಿದೆ. ಪಿತ-ಪತಿ-ಸುತರ ರಕ್ಷಣೆಯಲ್ಲಿರಬೇಕೆಂದೂ, ಸ್ವಾತಂತ್ರ್ಯಕ್ಕೆ ಅನರ್ಹಳೆಂದೂ ಮನುವಿನಿಂದ ಬೇಡಿ ತೊಡಿಸಿಕೊಂಡ ಸ್ತ್ರೀಗೆ ರಕ್ಷಕರಿದ್ದೂ ದಯನೀಯ ಸ್ಥಿತಿಯುಂಟಾದುದು ಹೇಗೆ ? ಉತ್ತರ ಹುಡುಕುವ ಪ್ರಯತ್ನ ಈ ಕವನಗಳಲ್ಲಿ ಸಾಗಿದೆ. ಇಲ್ಲಿನ ಎಲ್ಲ ಕವಿತೆಗಳೂ ಅಸಹಾಯಕ ಹೆಣ್ಣಿನ ನೋವಿನ ಧ್ವನಿಗಳನ್ನು ಸ್ಪಷ್ಟವಾಗಿ ಗುರುತಿಸಿವೆ. ಹೊನ್ನು ಮಣ್ಣುಗಳ ಜೊತೆಗೆ ಪುರುಷನ ಒಡೆತನಕ್ಕೆ ಸೇರುವ ಹೆಣ್ಣು ಒಂದು ವಸ್ತುವಲ್ಲ ಎಂಬ ತೀವ್ರ ಪ್ರತಿಭಟನೆ ಈ ಕವಿತೆಗಳ ಮುಖ್ಯ ಧನಿಯಾಗಿದೆ.

About the Author

ಕೆ. ಸರೋಜಾ

ಡಾ. ಕೆ. ಸರೋಜಾ, ಮೈಸೂರಿನ ಮಾನಸಗಂಗೋತ್ರಿ ಹಾಗೂ ಧಾರವಾಡದ ಕಷಿ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ICARನಿಂದ ಇವರಿಗೆ ಅತ್ಯುತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಬಂದಿದೆ. ತಮ್ಮ ದೀರ್ಘಾವಧಿಯ ಬೋಧನಾನುಭವದಲ್ಲಿ ವಿದ್ಯಾರ್ಥಿ ವರ್ಗದಲ್ಲಿ ಹೆಚ್ಚಿನವರಿಗೆ ಇಂಗ್ಲಿಷ್‌ನಲ್ಲಿರುವ ಅನೇಕ ಪರಿಕಲ್ಪನೆಗಳು (concepts) ಸ್ಪಷ್ಟವಾಗಿ ಪೂರ್ತಿ ತಿಳಿಯಲಾಗದೇ ಇರುವುದನ್ನು ಗಮನಿಸಿ ತರಗತಿಗಳಲ್ಲಿ ಅವುಗಳನ್ನೆಲ್ಲಾ ಕನ್ನಡದಲ್ಲಿ ಉದಾಹರಣಾ ಸಹಿತ ಚಿತ್ರವತ್ತಾಗಿ ಬೋಧಿಸುತ್ತಾ ಇವರು ವಿದ್ಯಾರ್ಥಿ ಸಮೂಹಗಳಲ್ಲಿ ಜನಪ್ರಿಯರಾಗಿದ್ದವರು. ತಾವು ಬೋಧಿಸುತ್ತಿದ್ದ ಮಾನವ ವಿಕಾಸ (Human Development) ಶಾಖೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇಂದಿಗೂ ಅಧ್ಯಯನ ಮಾಡುತ್ತಲೇ ಇದ್ದಾರೆ. ಇವರ ಮೊದಲ ...

READ MORE

Related Books