ಒಡಲ ಕಾವು

Author : ಸಂತೋಷ್ ಕುಮಾರ್ ಎನ್

Pages 72

₹ 70.00




Year of Publication: 2021
Published by: ಕಾರುಣ್ಯ ಪ್ರಕಾಶನ
Address: #2107, ತಂಡವೇಶ್ವರ ನಿಲಯ, ವಿನೋಭಾ ರೋಡ್, 1 ನೇ ಕ್ರಾಸ್, ಸುಭಾಶ್ ನಗರ ಮಂಡ್ಯ-571401

Synopsys

’ಒಡಲ ಕಾವು’ ಸಂತೋಷ್ ಕುಮಾರ್ ಎನ್. ಅವರ ಚೊಚ್ಚಲ ಕವನಸಂಕಲನ.  ಕೃತಿಗೆ ಮುನ್ನುಡಿ ಬರೆದಿರುವ ರಂಗಮ್ಮ ಹೊದೆಕಲ್ `ಒಡಲ ಕಾವು, ಕವನ ಸಂಕಲನದ ಮೂಲಕ ಮುಖ ಮುಖಿಯಾಗಿರುವ ಸಂತೋಷನ ಕವಿತೆಗಳಲ್ಲಿ ಬದುಕನ್ನು ಬಗೆದ ಕವಿತೆಗಳಿವೆ .ಏಕಾಂತದ ಸಂಕಟ, ಸಂತನಗಳಿವೆ' ಕನಸುಗಳ ಚಿತ್ತಾರವಿದೆ, ವಿಷಾದವೂ ಇದೆ, ಅವನ ಸಾಲುಗಳಲ್ಲಿ ಮೆರೆಯುತ್ತಿದ್ದ ಪಾಂಡಿತ್ಯ ಕಾವ್ಯದ ಬಗೆಗಿನ ಅವನ ಗಂಭೀರ ಪ್ರೀತಿ ಇತರರನ್ನು ಓದಿಕೊಳ್ಳುವ, ತನ್ನನ್ನು ತೀಡಿಕೊಳ್ಳುವ ವಿಚಾರಗಳಿವೆ. ನಮ್ಮ ಭಾವಗಳು ಕಂಡ ಚಿತ್ರಗಳು, ಅನುಭವಗಳು, ಸನ್ನಿವೇಶಗಳು ಬದುಕಿನ ಪ್ರೀತಿಯ ಪಾತ್ರಗಳು, ಅವುಡುಗಚ್ಚಿದ ಬಿರುಗಳು ಕಣ್ಣಲ್ಲಿ ನೀರು ತರಿಸಿದ ಸುಖಗಳು, ಇವೆಲ್ಲವೂ ಹದವಾಗಿ ಪದಗಳಲ್ಲಿ ಸೇರಿ ವ್ಯಕ್ತವಾಗುವ ರೀತಿಯು ನಮ್ಮನ್ನು ನಮಗೆ ಕಾಣಿಸುವ ಜೊತೆಗೆ ಲೋಕವನ್ನು ನೋಡಲು ಜತೆಯಾಗುತ್ತದೆ. ಸಂತೋಷನ ಕವಿತೆಗಳಲ್ಲಿ ಅವನು ತನ್ನನ್ನು ತಾನು ನೋಡಿಕೊಂಡಿದ್ದಾನೆ, ಸುತ್ತಲಿನ ಪ್ರಪಂಚವನ್ನು ಕಂಡಿದ್ದಾನೆ. 'ಉಸಿರಿಗೂ ಉಸಿರಾದವಳ ಚೆಲುವ' ಬಣ್ಣಿಸುವ ಹಾಗೆ ಕ್ರೌರ್ಯಕ್ಕೆ ಬಲಿಯಾಗುವ ಹೆಣ್ಣುಗಳ ಆರ್ತತೆಯೂ ಇವನನ್ನು ತಟ್ಟುತ್ತದೆ. ಸಂತೋಷನ ಇಷ್ಟು ಕವಿತೆಗಳಲ್ಲಿ ಕೆಲವು ಕವಿತೆಗಳು ಹುಟ್ಟಿವೆ ಕೆಲವು ಕವಿತೆಗಳು ಹಠಕ್ಕೆ ಬಿದ್ದು ಕಟ್ಟಿಸಿಕೊಂಡಿವೆ; ಕೆಲವು ಹಗುರಾಗಿರುವ ಕೆಲವು ತೂಕ ಉಳಿಸಿಕೊಂಡಿವ! ಕೆಲವು ನೇರಾ ಎದೆಗೆ ಇಳಿಯುತ್ತವೆ! ಕಣ್ಣು, ಎದೆಗಳ ಆದ್ರ್ರತೆಯನ್ನು ಕಾಪಿಟ್ಟುಕೊಳ್ಳಬಲ್ಲ ಸಂತೋಷ್ ಬರೆಯುತ್ತ, ಓದುತ್ತ ಇನ್ನಷ್ಟು ಮಾಗುವ ಎಲ್ಲ ಲಕ್ಷಣಗಳಲ್ಲಿ ಕಾಣಿಸಿದ್ದಾನೆ. ಕಾವ್ಯದ ಬಗೆಗಿನ ಪ್ರೀತಿ ಮತ್ತು ಇದು ಕವಿತೆಯಾಗಲಿಲ್ಲವೇನೋ ಎನ್ನುವ ಅವನ ಅತಂಕ ಅವನನ್ನು ಮತ್ತೂ ಬೆಳೆಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಸಂತೋಷ್ ಕುಮಾರ್ ಎನ್

ಲೇಖಕ ಸಂತೋಷ್ ಕುಮಾರ್ ಮೂಲತಃ ನರಸೀಪುರ ತಾಲೂಕಿನ ಕೆಂಪನಪುರದವರು. ಓದು-ಬರಹ ಇವರ ಆಸಕ್ತಿ. ಕೇರಳದ ಪಾಲಕ್ಕಾಡ್ ನಲ್ಲಿ ಬಿಇಎಂಎಲ್ ಲಿ. ಸಂಸ್ಥೆಯ ಉದ್ಯೋಗಿ.  ಕೃತಿಗಳು: ಒಡಲ ಕಾವು ...

READ MORE

Related Books