ಭಾವಕ್ಕೆ ತಕ್ಕಂತೆ

Author : ಅನಿತಾ ನಾಡಿಗ್

Pages 104

₹ 100.00
Year of Publication: 2019
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: ಬೆಂಗಳೂರು
Phone: 9739561334

Synopsys

ಕವಯತ್ರಿ ಅನಿತಾ ನಾಡಿಗ್ ಅವರ ಹನಿಗವನಗಳ ಸಂಕಲನ-ಭಾವಕ್ಕೆ ತಕ್ಕಂತೆ’. ಕೃತಿಗೆ ಬೆನ್ನುಡಿ ಬರೆದಿರುವ ಕವಿ ಜರಗನಹಳ್ಳಿ ಶಿವಶಂಕರ್, ಕವಯಿತ್ರಿ ಅನಿತಾ ನಾಡಿಗ್ ಅವರ ಹನಿಗವಿತೆಗಳ ಸಂಕಲನ ‘ಭಾವಕ್ಕೆ ತಕ್ಕಂತೆ’ ಶೀರ್ಷಿಕೆಯು ನನ್ನಲ್ಲಿ ಅನೇಕ ರೀತಿಗಳಲ್ಲಿ ಚಿಂತನೆಗಳನ್ನು ಹುಟ್ಟಿಸಿದೆ. ಭಾವನೆಗಳ ಒತ್ತಡದಿಂದ ಕವಿತೆ ಹೊರಹೊಮ್ಮುತ್ತದೆ. ಒತ್ತಡ ಎನ್ನುವುದು ಇಲ್ಲಿ ಪ್ರೀತಿ, ಭಾವನೆ, ಚಿಂತನೆ-ಹೀಗೆ ಅನೇಕ ಅರ್ಥಗಳನ್ನು ಹೊಮ್ಮಿಸುತ್ತದೆ. ‘ಸತ್ತವೆ ನೆರಳು’ ಒಂದು ಉತ್ತಮ ರೂಪಕವಾಗಿ ಮೂಡಿ ಬಂದಿದೆ. ದೇಶ ಶಾಶ್ವತವಲ್ಲ, ನೆನಪುಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಇಲ್ಲಿ ನೆನಪು ಎನ್ನುವುದನ್ನು ಕವಿತೆಯೆಂದೂ ಪರಿಭಾವಿಸಬಹುದ” ಎಂದಿದ್ದಾರೆ.

About the Author

ಅನಿತಾ ನಾಡಿಗ್

ಲೇಖಕಿ ಅನಿತಾ ನಾಡಿಗ್ ಅವರು ಎಂಜಿನಿಯರಿಂಗ್ ಪದವೀಧರರು. ಸಾಫ್ಟ್ ವ್ಹೇರ್ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ನಂತರ ಅವರು ಮನಃಶಾಸ್ತ್ರವನ್ನು ಅಧ್ಯಯನ ಮಾಡಿ, ಸಮಾಜದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಉದ್ದೇಶದೊಂದಿಗೆ ಮೈಂಡ್ ಸಖ್ಯ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಕೌನ್ಸಿಲಿಂಗ್ ಸೈಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವಾಸ ಹಾಘೂ ಚಾರಣ ಇವರ ಹವ್ಯಾಸ.  ಕೃತಿಗಳು: ಅಜ್ಜಿ ಪಂಚ್ ತಂತ್ರ (ನೈಜ ಘಟನೆ ಆಧರಿತ ಹಾಸ್ಯ ಲಲಿತ ಪ್ರಬಂಧಗಳು) ಭಾವಕ್ಕೆ ತಕ್ಕಂತೆ,    ...

READ MORE

Related Books