ಚೈತ್ರದ ಚರಮಗೀತೆ

Author : ಶಿಲ್ಪಾ ಮ್ಯಾಗೇರಿ

Pages 94

₹ 100.00
Year of Publication: 2024
Published by: ವಿಶಾಲ ಪ್ರಕಾಶನ ಮಾದಿನೂರ
Address: ವಿಶಾಲ ಪ್ರಕಾಶನ ಮಾದಿನೂರ, ಶ್ರಿ ಬಸವ ಸದನ, ಪದಕೀ ಲೇಔಟ್, 21ನೇ ವಾರ್ಡ್, ಶಾರಾದಾ ಸ್ಕೂಲ್ ಹತ್ತಿರ, ಕೊಪ್ಪಳ-583 231
Phone: 944802567

Synopsys

‘ಚೈತ್ರದ ಚರಮಗೀತೆ’ ಶಿಲ್ಪಾ ಮ್ಯಾಗೇರಿ ಅವರ ಕವನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕವಿ ಮಂಜುಳ ಕಿರುಗಾವಲು  'ಬೆಳಕಿನ ಕನಸು ನನ್ನ ನಡೆಸುತ್ತಿಲ್ಲ ಕತ್ತಲೆಯ ಭಯ ನನ್ನ ತಡೆಯುವುದೂ ಇಲ್ಲ ಸಾಗುತ್ತೇನೆ ಬದುಕೆನ್ನುವ ಬದುಕಿಗೆ ಸವಾಲು ಹಾಕಿ ನೆಚ್ಚಿದ ಅಚ್ಚಳಿಯದ ದಿಗಂತದಲ್ಲಿ ಲೀನವಾಗುವವರೆಗೆ ಪ್ರಸ್ತುತ ಚೈತ್ರದ ಚರಮಗೀತೆ ಕವನ ಸಂಕಲನವೂ ಸ್ತ್ರೀ ಸಂವೇದನೆಯ ಹಿನ್ನೆಲೆ ರಚಿತಗೊಂಡಿದೆ ಎಂದಿದ್ದಾರೆ.

ಜೊತೆಗೆ ಸ್ವತಂತ್ರ ರೆಕ್ಕೆಗಳಿವೆ ಆದರಿನ್ನೂ ಹಾರಲು ಅನುಮತಿ ಪತ್ರ ದೊರೆತಿಲ್ಲ ಮೇಲಿನ ಕಾವ್ಯದ ಸಾಲುಗಳು ಮಹಿಳೆ ಎಲ್ಲಾ ರೀತಿಯಲ್ಲೂ ಸ್ವತಂತ್ರಳಿದ್ದರೂ, ಸಾಮಾಜಿಕ ಚೌಕಟ್ಟಿನಲ್ಲಿ, ಕೌಟುಂಬಿಕ ಜಂಜಾಟದಲ್ಲಿ, ನಾವೇ ರೂಢಿಸಿಕೊಂಡ ಸಂಪ್ರದಾಯ ಆಚರಣೆಗಳ ಹೆಸರಲ್ಲಿ ಹೆಣ್ಣನ್ನು ಹೇಗೆ ಬಂಧಿಸಲಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಮೂಲಕ ಕಾಲ ಯಾವುದಾದರೇನು ಹೆಣ್ಣನ್ನು ಬಂಧಿಸಲು ಸಂಪ್ರದಾಯ, ಆಚರಣೆಗಳೆಂಬ ಪಂಜರ ಸದಾ ಸಿದ್ಧವಾಗಿರುತ್ತದೆ ಎನ್ನುತ್ತಾರೆ. ಜಾತಿ, ಧರ್ಮ, ರಾಜಕೀಯ, ದ್ವೇಷ ಯಾವುದೇ ಆಗಲಿ ಹೆಣ್ಣೆ ಮೊದಲ ಬಲಿಪಶು. ಸಮಾಜ ರೂಪಿಸಿರುವ ಅಥವಾ ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಕಟ್ಟಿ ಹಾಕಿರುವ ಸರಪಳಿಯಿಂದ ಮುಕ್ತವಾಗಬೇಕೆನ್ನುವ ಆಶಯ ಅವರ ಕವಿತೆಗಳಲ್ಲಿವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. 

About the Author

ಶಿಲ್ಪಾ ಮ್ಯಾಗೇರಿ

ಶಿಲ್ಪಾ ಮ್ಯಾಗೇರಿ ಅವರು ಮೂಲತಃ ಗದಗ ಜಿಲ್ಲೆಯವರು, ತಾಯಿಯ ಮನೆ ಕೊಪ್ಪಳ ಅಲ್ಲಿಂದಲೇ ಸಾಹಿತ್ಯದ ನಂಟು ಬೆಸೆದುಕೊಂಡ ಶಿಲ್ಪಾ ಮ್ಯಾಗೇರಿ ಅವರು ಎಂ.ಎ. ಬಿ.ಎಡ್. ಪೂರ್ಣಗೊಳಿಸಿ ಸದ್ಯ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ, ಚಿತ್ರಕಲೆ, ಕಸೂತಿಕಲೆಗಳನ್ನು ತಮ್ಮ ಹವ್ಯಾಸವಾಗಿಸಿಕೊಂಡಿರುವ ಅವರು ಮೂರು ಕೃತಿಗಳನ್ನು ಪ್ರಕಟಿದ್ದಾರೆ.  ಕೃತಿಗಳು:  1 ಭಾರತಾಂಬೆ ಪ್ರಥಮ ಕವನ ಸಂಕಲನ 2015 ರಲ್ಲಿ.  2 ಆಕಾಶಕ್ಕೊಂದು ಏಣಿ ಚುಟುಕು ಸಂಕಲನ. 3 ಮಾತು ಮೌನದ ನಡುವೆ ಕವನ ಸಂಕಲನ. ...

READ MORE

Related Books