ತೇವ ಕಾಯುವ ಬೀಜ

Author : ಬಸವರಾಜ ಸೂಳಿಭಾವಿ (ಬಸೂ)

Pages 180

₹ 160.00
Published by: ಕವಿ ಪ್ರಕಾಶನ

Synopsys

ಲೇಖಕ, ಕವಿ ಬಸವರಾಜ ಸೂಳಿಭಾವಿ (ಬಸೂ) ಅವರು ಬರೆದಿರುವ ’ತೇವ ಕಾಯುವ ಬೀಜ ’ ಕವನ ಸಂಕಲನವು ಅಪೂರ್ವವಾದ ಕೃತಿ. ಒಂದು ಆಕಸ್ಮಿಕ ವಸ್ತು ವಿಷಯವನ್ನು ಪದ್ಯವಾಗಿಸಿ, ಅದನ್ನು ಸಂಕಲನಗೊಳಿಸಿ ಮುಂದಿಡುವುದು ಬಸೂ ಅವರ ಕಾವ್ಯದ ವಿದ್ಯಮಾನವೆನ್ನಬಹುದು.

ಇವರ ಕಾವ್ಯ ರಚನೆಯೇ  ಒಂದು ರೂಪಕಾವಸ್ಥೆಯಾಗಿದೆ.  ಕವಿಯು ಖಾಸಗಿ ಸಂವಾದದೊಂದಿಗೆ, ಲೋಕವನ್ನೂ, ಮುನ್ನೆಲೆಗೆ ತಂದು ಸಂಬಂಧಗಳನ್ನು ಸಮಾಜಮುಖಿಯಾಗಿಸುವ ಬೌದ್ಧಿಕ ನಿಲುವನ್ನು ಇಲ್ಲಿ ಕಾಣಬಹುದು.

ಸಾಂಸ್ಕೃತಿಕ -ಸಾಮಾಜಿಕ ಜವಾಬ್ದಾರಿಗಳಲ್ಲಿ ಮುಳುಗಿದಾಗಲೂ ಸಂವೇದನೆಯನ್ನು ಕಾವ್ಯಾತ್ಮಕ ಕ್ರಿಯೆಗೆ ಸಜ್ಜುಗೊಳಿಸುವ ಸೂಕ್ಷ್ಮತೆಯನ್ನು ಬಸೂ ಅವರು ಕಾಪಿಟ್ಟಿದ್ದಾರೆ.  ಬಸೂ ಕನ್ನಡಕ್ಕೊಂದು ಭಾವದೀಪ್ತ ಕಾವ್ಯ ನೀಡಿದ್ದಾರಷ್ಟೇ ಅಲ್ಲ, ಕಾವ್ಯವನ್ನು ಅದರ ಸ್ವಾಭಾವಿಕ ನೆಲೆಗೆ ಮತ್ತೆ ತಂದಿದ್ದಾರೆ.

About the Author

ಬಸವರಾಜ ಸೂಳಿಭಾವಿ (ಬಸೂ)

.ಬಸವರಾಜ ಸೂಳಿಭಾವಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ರೂಡಗಿ ಗ್ರಾಮದವರು. ಆದರೆ ಈಗ ಧಾರವಾಡ ನಿವಾಸಿ. ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವೀಧರರು. ‘ಲಡಾಯಿ’ ಎಂಬ ವಾರಪತ್ರಿಕೆ ಆರಂಭಿಸಿದ್ದರು. ಸದ್ಯ ಲಡಾಯಿ ಪ್ರಕಾಶನ ನಡೆಸುತ್ತಿದ್ದಾರೆ.  ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ತೇವ ಕಾಯುವ ಬೀಜ-ಇವರ ಕವನ ಸಂಕಲನ.ಗೌರಿ ನೋಟ (ಲೇಖನಗಳ ಸಂಪಾದನಾ ಕೃತಿ).  ...

READ MORE

Reviews

(ಹೊಸತು, ನವೆಂಬರ್ 2013, ಪುಸ್ತಕದ ಪರಿಚಯ)

ಕವಿತೆ ಸುಖದ ಸುಪ್ಪತ್ತಿಗೆಯಲ್ಲಿದ್ದಾಗ ಹುಟ್ಟುವುದಿಲ್ಲ; ಮಿಡಿಯುವ ಶೋಕಗೀತೆಗಳು ಬೇಕಾದಷ್ಟು ಇರುವಂತೆ ಸುಖೀಗೀತೆಗಳು ಸಂಖ್ಯೆಯಲ್ಲಿ ಬಲು ಕಡಿಮೆ, ಹಾಸಿ ನೋಡ ನೋಡಲು ಚಂದ. ಅದು ಅರ್ಥವಾಗಿ ಕೆಳಗಿಳಿದು ಬರುವ ಕಷ್ಟ ನೋಡದಷ್ಟು ಜೀವ ಮೊಳೆಯುವ ದ್ರವ್ಯ ಹೊಂದಿಲ್ಲ. ಈ ಮಾತುಗಳು ಏಕೆಂದರೆ ಬಸೂ ಅವರ ಈ ಕವನಗಳನ್ನು ಓದಿದರೆ ಇಂಥ ವಿಚಾರ ಮನದೊಳಗೆ ಸುಳಿಯುತ್ತದೆ. ಸಂಪೂರ್ಣ ಬದುಕಿಗೆ ಸಾಕಾಗಿ ತುಳುಕುವಷ್ಟು ಸಾಹಿತ್ಯದವ ವಿದ್ದುದು ಪ್ರೇಮಗೀತೆಗಳಾಗಿ ಹೊಮ್ಮ ಬೇಕಾಗಿದ್ದುದು ಹಾಗಾಗದೆ ಇಲ್ಲಿನ ಕವಿತೆಗಳೆಂದು ನಿಟ್ಟುಸಿರುಗಳಾಗಿ ಇಳಿದು ಬಂದಿದೆ. ಯಾವುದೇ ಕವಿತೆಗೆ ಶೀರ್ಷಿಕ ಇಲ್ಲದ ಬರೋಬ್ಬರಿ ೨೦೨ ಗೀತೆಗಳು ಬದುಕಿನ ಕಥೆ ಹೇಳುತ್ತಿವೆ. ಪುಸ್ತಕದ ಬೈಂಡಿಂಗ್‌ನಲ್ಲೂ ಬೆಳಕು-ಕತ್ತಲೆ, ಹಗಲು-ಇರುಳು ಸಂಕೇತಿಸಲ್ಪಟ್ಟಿದೆ, ಮೊದಲ ಹಾಳೆ ಶುಭ್ರ ಬಿಳಿಯರು ಹುಣ್ಣಿಮೆಯಂತೆ. ಎರಡನೆಯದು ಅಮಾವಾಸ್ಯೆಯ ಕಾರಿರುಳು. ಸಂತೋಷ-ಸಂಭ್ರಮ ವೆಂದರೆ ಮೂರನೆಯ ಹಾಳೆ ಮತ್ತೆ ಅಕ್ಷರಗಳೊಂದಿಗೆ ಬಿಳಿಯದು – ಈ ಸಂಯೋಜನೆಯನ್ನೇ ಒಂದು ಮೌನ ಕವನ ಎನ್ನೋಣವೆ ? ಸದೃಕ್ಕೆ ಈ ಕಪ್ಪು-ಬಿಳುಪಿನ ಸಂಕಲನವನ್ನೋಡೋಣ, ಮುಂದೆ ಅವರ ಕನಸಿನ ಬದುಕು ಬಣ್ಣಗಳ ಸಂಕಲನವಾಗಿ ಹೊರಬರಲೆಂದು ಆಶಿಸೋಣ. 

Related Books