ಮಾಯದ ಸಾಲುಗಳು

Author : ಪರಮೇಶ್ವರ ಗುರುಸ್ವಾಮಿ.

₹ 60.00
Year of Publication: 2018
Published by: ಬರಹ ಪಬ್ಲಿಷಿಂಗ್‌ ಹೌಸ್‌, ಬೆಂಗಳೂರು.

Synopsys

ಕವಿ ಪರಮೇಶ್ವರ ಗುರುಸ್ವಾಮಿ ಅವರು ಬರೆದ ಕವನ ಸಂಕಲನ ʼಮಾಯದ ಸಾಲುಗಳುʼ. ಲೇಖಕಿ ಸಂಧ್ಯಾರಾಣಿ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ʼಕವಿತೆ ಘಟಿಸುವುದು ಕವಿ ಬರೆಯುವ ಸಾಲುಗಳ ನಡುವಿನ ಮೌನದಲ್ಲಿʼ ಎಂದು ತಿಳಿದವರು ಹೇಳುತ್ತಾರೆ. ಹಾಗೆ ಮೌನ ಮಾತನಾಡುವಂತಹ ಸಾಲುಗಳನ್ನು ಸೃಷ್ಟಿಸಬಲ್ಲ ಕವಿ. ಪರಮೇಶ್ವರ ಗುರುಸ್ವಾಮಿ ಅವರು ಅಂತಹ ಸಾಲುಗಳನ್ನು ಬರೆಯುವ ಕವಿ. ಬೆಡಗಿನ ವಚನಗಳನ್ನು ಒಂದು ವ್ಯಾಮೋಹದಂತೆ ಓದುವ, ಅವುಗಳ ಬಗ್ಗೆ ಮಾತನಾಡುವ ಪರಮೇಶ್ವರ್‌ ಅವರು ತಮ್ಮ ಕ್ಯಾಮರಾದಿಂದ ಬರೆದ ಕವಿತೆಗಳನ್ನು ನಾವೆಲ್ಲರೂ ನೋಡಿದ್ದೇವೆ. ಚಲನಚಿತ್ರದ ಭಾಷೆಯ ಬಗ್ಗೆ ಅವರು ಕೊಡುವ ಒಳನೋಟಗಳನ್ನೂ ನಾವು ಕೇಳಿದ್ದೇವೆ. ಈಗ ಅವರೂ ನಮ್ಮೊಡನೆ ಅಕ್ಷರಗಳ ಮೂಲಕ ಸಂವಾದಿಸುತ್ತಿದ್ದಾರೆ. ಚಿಲಕದಂತಹ ಚಿಲಕ ಹಿಡಿದು ಇವರು ಜಗತ್ತನ್ನು ತೋರಿಸಬಲ್ಲರು, ಚೌಕಟ್ಟಿನ ಗೋಡೆ ಮುರಿದು ಬಯಲಾಗಬಲ್ಲರು. ಇವೆಲ್ಲವೂ ಆಗುವಾಗಲೂ ಇವರನ್ನು, ಇವರ ಕವಿತೆಗಳನ್ನೂ ಪೊರೆಯುವುದು ಇವರ ಆರ್ದ್ರ ಅಂತಃಕರಣ ನಿಜ. ಹಾಗೆ ಕಳೆದುಹೋದ ಎಳೆಗಳು ಕಾಣೆಯಾಗದಂತೆ ಅವರು ಹೊಲೆದಿದ್ದಾರೆ ಎನ್ನುವ ಕಾರಣಕ್ಕೆ ಇದು ಕೇವಲ ಹೊಳೆಯುವ ವಸ್ತ್ರವಾಗಿಲ್ಲ, ಬೆಚ್ಚನೆಯ ಕೌದಿಯಾಗಿದೆ ಎಂದು ಹೇಳಿದ್ದಾರೆ.

About the Author

ಪರಮೇಶ್ವರ ಗುರುಸ್ವಾಮಿ.

ಪರಮೇಶ್ವರ ಗುರುಸ್ವಾಮಿ ಅವರು ಮೂಲತಃ ಮೈಸೂರಿನವರು. ಇವರಿಗೆ ಸಾಹಿತ್ಯ, ಸಿನೆಮಾ ಮತ್ತು ಸಂಸ್ಕೃತಿಯ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿ ಸಿನೆಮಾ ತಾಂತ್ರಿಕಕತೆ ಹಾಗೂ ಸಾಹಿತ್ಯದಲ್ಲಿ ಕಥನ ಪ್ರಯೋಗಗಳನ್ನು ಮಾಡಿರುತ್ತಾರೆ. ಅಲ್ಲದೆ, ಇವರು ಕಾವ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡವರು. ಸಾಮಾಜಿಕ ತಾಲತಾಣದಲ್ಲಿ ತಾವು ಬರೆದ ಅನೇಕ ಕವಿತೆಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ. ಜೊತೆಗೆ ಅಂಕಣ ಬರಹಗಾರರು ಕೂಡಾ. ...

READ MORE

Related Books