ಚಿತ್ರ ಚಿಗುರುವ ಹೊತ್ತು

Author : ಚಾಂದ್ ಪಾಷ

Pages 84

₹ 80.00
Year of Publication: 2020
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

‘ಚಿತ್ರ ಚಿಗುರುವ ಹೊತ್ತು’ ಚಾಂದ್ ಪಾಷ ಎನ್.ಎಸ್ ಅವರ ಕವನ ಸಂಕಲನ. ಸಂಗಾತ ಪ್ರಕಾಶನದಿಂದ ಚಿ.ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಪಡೆದು ಪ್ರಕಟವಾಗುತ್ತಿರುವ ಈ ಸಂಕಲನಕ್ಕೆ ಹಿರಿಯ ಸಾಹಿತಿ, ಚಿಂತಕ ನಟರಾಜ್ ಹುಳಿಯಾರ್ ಅವರು ಬೆನ್ನುಡಿ ಬರೆದಿದ್ದಾರೆ. ‘ಅವರ ವ್ಯಗ್ರ ಕಾವ್ಯ ಎಲ್ಲ ಧರ್ಮಗಳ ಕತ್ತಲನ್ನೂ ಸೀಳಲೆತ್ನಿಸುತ್ತಾ, ಸುತ್ತಣ ಕಾಯಿಲೆಗಳಿಗೆ ಉತ್ತರಕ್ಕಾಗಿ ತಡಕಾಡುತಿತ್ತು: ಭಾವಗೀತೆ, ಗದ್ಯಸ್ಫೋಟಗಳ ನಡುವೆ ಹೊಯ್ದಾಡುತ್ತಿತ್ತು, ಚಾಂದ್ ಪ್ರತಿಮೆಗಳಲ್ಲಿ ಚಂದ್ರ ಸೂರ್ಯರೂ ದಫನ್ ಆಗುವುದನ್ನು. ಸತ್ತ ಎದೆಯ ಮೇಲೆ ಕವಿತೆಯ ತುಕಡ ಅಡ್ಡಾಡುವುದನ್ನು, ಹಲಾಲ್ ಆಗದ ಪ್ರೇಮವನ್ನು ಕತ್ತರಿಸಿ ಎಸೆದ ಮಾಂಸದಂಗಡಿಗಳನ್ನು ಎಲ್ಲಾ ಕಾಲದ ಸೀತಾದಹನವನ್ನು ಕಂಡವರಿಗೆ ಗಂಭೀರ ಕವಿದನಿಯೊಂದು ಸ್ಪಷ್ಟವಾಗಿ ಕೇಳಿಸತೊಡಗುತ್ತದೆ’ ಎನ್ನುತ್ತಾರೆ ನಟರಾಜ್ ಹುಳಿಯಾರ್.

About the Author

ಚಾಂದ್ ಪಾಷ
(05 May 1994)

ಸೂಕ್ಷ್ಮಪ್ರಜ್ಞೆಯುಳ್ಳ ಸಮಕಾಲೀನ ಯುವಕವಿ ಚಾಂದ್ ಪಾಷ ಅವರು ಮೂಲತಃ ಕಲಬುರಗಿ ಅವರು. ಕವಿಚಂದ್ರ ಅವರ ಕಾವ್ಯನಾಮ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ದಿ ಆಕ್ಸ್ಫರ್ಡ್ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಮೌನದ ಮಳೆ’ 2015ರಲ್ಲಿ ಪ್ರಕಟವಾಯಿತು. 2020ನೇ ಸಾಲಿನ ‘ಕುವೆಂಪು ಯುವ ಕವಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ...

READ MORE

Related Books