ಚಕ್ರಪಾಣಿಯ ಮುಕ್ತಕ ಮಣಿಗಳು

Author : ಹರಿ ನರಸಿಂಹ ಉಪಾಧ್ಯಾಯ

Pages 94




Year of Publication: 2022
Published by: ಹೆಚ್ ಎಸ್ ಆರ್ ಎ ಪ್ರಕಾಶನ
Address: ಬೆಂಗಳೂರು

Synopsys

ಚಕ್ರಪಾಣಿಯ ಮುಕ್ತಕ ಮಣಿಗಳು - ಇದು ಹರಿನರಸಿಂಹ ಉಪಾಧ್ಯಾಯ, ಶಂಭೂರು ಇವರ ನಾಲ್ಕನೆಯ ಕೃತಿ. ಛಂದೋಬದ್ಧ ಸಾಹಿತ್ಯದ ಪ್ರಕಾರವಾದ ಮುಕ್ತಕಗಳು ನಾಲ್ಕು ಸಾಲಿನ ರಚನೆಗಳಾಗಿರುತ್ತವೆ. ಈ ಛಂದಸ್ಸು ಬಳಸಿ ರಚಿಸುವ ಷಟ್ಪದಿ, ಮುಕ್ತಕಗಳು, ವೃತ್ತಗಳಲ್ಲಿ ತಮ್ಮ ಸಾಹಿತ್ಯ ಹೊನಲನ್ನು ಹರಿಸಿದ ಇವರು ಈ ಕೃತಿಯಲ್ಲಿ 410 ಮುಕ್ತಕಗಳನ್ನು ಒಟ್ಟು ಸೇರಿಸಿರುವುದನ್ನು ಕಾಣಬಹುದು. ಕರ್ನಾಟಕ ರಾಜ್ಯ ಮುಕ್ತಕ ಪರಿಷತ್ತು, ಮೈಸೂರು ಇದರ ಅಧ್ಯಕ್ಷರಾದ ಎಂ ಮುತ್ತುಸ್ವಾಮಿ ರವರ ಮುನ್ನುಡಿ ಹಾಗೂ ಕಾಸರಗೋಡು ಗೋಪಾಲಭಟ್ ಸಿ ಯಚ್ ರವರ ಬೆನ್ನುಡಿಯಿದೆ. ಗಣ, ಪ್ರಾಸ, ಯತಿ, ಮಾತ್ರೆ, ಎಂದರೆ ಖಿನ್ನರಾಗುವ ಈ ಕಾಲಘಟ್ಟದಲ್ಲಿಯೂ ಗಜ, ಸಿಂಹ, ಅಜ, ವೃಷಭ, ಹಯ ಮತ್ತು ಶರಭ ಪ್ರಾಸಗಳಲ್ಲಿ ಮುಕ್ತಕಗಳನ್ನು ರಚಿಸುವ ಕಲೆಯನ್ನು ಸಿದ್ಧಿಸಿಕೊಂಡಿರುವ ಕವಿಗಳು ಪ್ರಸ್ತುತ ಈ ಪುಷ್ಪಗುಚ್ಛವನ್ನು ಕನ್ನಡ ತಾಯಿಯ ಸಿರಿಮುಡಿಗೆ ಪೋಣಿಸುತ್ತಿರುವುದು ಮುಕ್ತಕ ಕವಿಗಳಿಗೆ ನವಶಕ್ತಿ ತುಂಬುವುದರ ಜೊತೆಗೆ ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತು ಸಂಸ್ಥೆಗೆ ಬಲವನ್ನು ತಂದಿದೆ ಎಂದು ಎಂ ಮುತ್ತುಸ್ವಾಮಿ ರವರು ಅಭಿಪ್ರಾಯಪಟ್ಟಿದ್ದಾರೆ. ಲೇಖಕರು ಧನಕನಕವನ್ನು ಗಳಿಸಿದ ವೀರಾಧಿವೀರರೆಲ್ಲ ನೆಲ ಕಚ್ಚಿದರು, ಕೋಟೆ ಕೊತ್ತಲ, ಸಾಮ್ರಾಜ್ಯ ಕಟ್ಟಿದವರು ಮಣ್ಣಾದರು, ಸಾಟಿ ನನಗಾರು ಎಂದು ಘರ್ಜಿಸಿದವರು ತಳ ಸೇರಿದರು, ನಿನ್ನ ಓಟ ಎತ್ತಕಡೆ ಎಂದು ಪ್ರಶ್ನಿಸುತ್ತ ಕಲಿಯುಗದ ಅಂಧರನ್ನು ತಮ್ಮ ಮುಕ್ತಕದಲ್ಲಿ ಎಚ್ಚರಿಸಿರುವುದನ್ನು ಇಲ್ಲಿ ಉಲ್ಲೇಖಸಲೇಬೇಕು..

About the Author

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020) 2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ...

READ MORE

Related Books