ಇರುವುದು ಒಂದೇ ರೊಟ್ಟಿ

Author : ಸದಾಶಿವ ದೊಡಮನಿ

Pages 96

₹ 120.00




Year of Publication: 2021
Published by: ಚಂದ್ರಭಾಗ ಪ್ರಕಾಶನ
Phone: 9481931970

Synopsys

ಕವಿ ಸದಾಶಿವ ದೊಡಮನಿ ಅವರ ‘ಇರುವುದು ಒಂದೇ ರೊಟ್ಟಿ’ಯು ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸುಬ್ಬು ಹೊಲೆಯಾರ್ ಅವರು, ಸದಾಶಿವ ಎನ್ನುವ ಹೆಸರಲ್ಲೇ ಶರಣ ಪರಂಪರೆಯ ಹರಳಯ್ಯನವರ ‘ಶರಣು ಶರಣಾರ್ಥಿ’ ಎನ್ನುವ ಭಾವ ತಲೆ ಭಾಗಿದ , ತೆನೆ ಭಾಗಿದ ಹೃದಯಸ್ಪರ್ಶಿಯಾಗಿ ಸಿಗುತ್ತದೆ. ಈ ಸಂಕಲನದ ಕವಿತೆಗಳನ್ನು ಓದುತ್ತಿದ್ದಾಗ ನನಗೆ ಬ್ರೆಕ್ಟ್ ಹೇಳಿದ ಒಂದು ಸಾಲು ಮತ್ತೆ ಮತ್ತೆ ನೆನಪಿಗೆ ಬಂತು. ನೀರು ಅತ್ಯಂತ ಮೃದು ಮತ್ತು ಕಠಿಣವಾದದ್ದು ಎಂದು. ಈ ಸಂಕಲನದ ಕವಿತೆಯ ಸಾಲುಗಳಲ್ಲಿ ಅತ್ಯಂತ ಮೃದುತ್ವ ಮತ್ತು ಕಾಠಿಣ್ಯವಿದೆ. ಕಾಠಿಣ್ಯ, ಸಹನೆ ಎಲ್ಲಿಂದ ಸಂವೇದನೆಗೊಂಡಿದ್ದು ಎಂದು ನೋಡಿದರೆ, ಈ ಸರಳ ಸಂವೇದನೆ ಬಗ್ಗೆ ಮಾತನಾಡುತ್ತ, ಕವಿ ಸದಾಶಿವ ಅವರ ತಂದೆ ಸುಮಾರು ಇಪ್ಪತ್ತಮೂರು ವರ್ಷಗಳ ಕಾಲ ಒಬ್ಬ ಗೌಡರ ಮನೆಯಲ್ಲಿ ಜೀತ ಮಾಡಿದ್ದನ್ನು ಅಂಚಿಕೊಂಡಿದ್ದಾರೆ.

 ಇಲ್ಲಿ ರೊಟ್ಟಿಯ ರೂಪಕ ಹಸಿವು ಎಂದು ಕವಿ ತೆಗೆದುಕೊಂಡಿದ್ದಾರೆ. ಈ ಕವಿತೆಯನ್ನು ಓದುವಾಗ ನನ್ನದೇ ಲೇಖನದ ಒಂದು ಸಾಲು ನೆನಪಿಗೆ ಬರುತ್ತದೆ. ಭೀಮಾ ಸಾಹೇಬರ ಹೊಟ್ಟೆಯಲ್ಲಿ ರಮಾಬಾಯಿ ಹಸಿದಿದ್ದರು. ಮುಂದಿನ ತಲೆ ಮಾರುಗಳ ಹಸಿದ ಮಕ್ಕಳ ಕೈಯಲ್ಲಿ ತುತ್ತಿರಲೆಂದು, ಅನ್ನ ಸಿಗಲೆಂದು. ಈಗ ನಾವು ಈ ಎಲ್ಲದಕ್ಕೂ ಧನ್ಯರು. ಇದನ್ನು ಹೇಳುವಾಗ ಸದಾಶಿವ ಅವರ ತಂದೆ, ತಾಯಿಯವರು ಹಸಿದಿದ್ದಕ್ಕೆ ಸದಾಶಿವ ಎಚ್ಚರವಾಗಿದ್ದಾರೆ. ಮತ್ತು ವಿವೇಕತನದಿಂದ ಸಮಾಜವನ್ನು ತಿದ್ದುವ ಮತ್ತು ಕಾವ್ಯದ ಮೂಲಕ ಎಚ್ಚರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಕಾವ್ಯದ ವಿವೇಕದ ಬೆಳಕು ಅವರಿಗೆ ದಕ್ಕಿದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಇಲ್ಲಿನ ಸಂಕಲನದ ಹಲವು ಸಾಲುಗಳು ಹೊಸ ಕನಸುಗಳಿಗೆ ಕೊಂಡೊಯ್ಯುತ್ತವೆ ಮತ್ತು ಓದುತ್ತ ತನಗೆ ತಾನೇ ಅರಿವು ಪಡೆದುಕೊಳ್ಳುತ್ತವೆ ಎನ್ನುವ ಭರವಸೆ ಈ ಸಂಕಲನಕ್ಕಿದೆ. ಅದಕ್ಕೆಂದೇ ಅವರ ‘ಪ್ರೇಮ ಭಿಕ್ಷು’ ಎನ್ನುವ ಕವಿತೆ ಒಂದು ವಿಭಿನ್ನ ಹೊಳಹುವನ್ನು ಸಂಕೇತಿಸುತ್ತದೆ ಎಂದಿದ್ದಾರೆ.  

About the Author

ಸದಾಶಿವ ದೊಡಮನಿ

ಸದಾಶಿವ ದೊಡಮನಿ ಮೂಲತಃ ಇಳಕಲ್ ನವರು. ಕಾವ್ಯ ಸಂಶೋಧನೆ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಗವಿತೆಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಇಳಕಲ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ನೆರಳಿಗೂ ಮೈಲಿಗೆ, ಇರುವುದು ಒಂದೇ ರೊಟ್ಟಿ ...

READ MORE

Related Books