ಒಡಲ ಉರಿಯ ನೆನೆದು

Author : ಅಕ್ಬರ್‌ ಸಿ. ಕಾಲಿಮಿರ್ಚಿ

Pages 88

₹ 90.00
Year of Publication: 2017
Published by: ಕನ್ನಡ ಮೈತ್ರಿ ಪ್ರಕಾಶನ
Address: ಭಾಗ್ಯನಗರ

Synopsys

ಅಕ್ಬರ್‌ ಕಾಲಿಮಿರ್ಚಿ ಅವರ ಕವಿತೆಗಳ ಸಂಕಲನ. ಹೈದರಾಬಾದ್‌ ಕರ್ನಾಟಕದ ದಾರುಣ ಸ್ಥಿತಿಯ ಚಿತ್ರಣ ನೀಡುವ ಈ ಸಂಕಲನದ ಕವಿತೆಗಳು ವರ್ತಮಾನದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಚಿತ್ರಣವನ್ನೂ ನೀಡುತ್ತವೆ. ಅಕ್ಬರ್‌ ಅವರ ಕವಿತೆಗಳು ಅತ್ಯುತ್ಸಾಹದಲ್ಲಿ ಬರೆದ ಚಿತ್ರಗಳಂತಿವೆ.

About the Author

ಅಕ್ಬರ್‌ ಸಿ. ಕಾಲಿಮಿರ್ಚಿ
(01 June 1965)

ಲೇಖಕ ಅಕ್ಬರ್‌ ಸಿ. ಕಾಲಿಮಿರ್ಚಿ ಮೂಲತಃ ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನ ಹುಟ್ಟೂರಿನಲ್ಲಿ, ನಂತರ ಬೆಂಗಳೂರಿನಲ್ಲಿ ಡಿಪ್ಲೋಮಾ, ರಾಮನಗರ ಜಿಲ್ಲೆಯಲ್ಲಿ ಔಷದ ವಿಜ್ಞಾನ ಪದವಿ ಪಡೆದರು. ಕಾವ್ಯ, ಮಕ್ಕಳ ಕವಿತೆ, ಕತೆ, ಜೀವನ ಚರಿತ್ರೆ, ಲೇಖನ, ಸಂಪಾದನೆ, ಕಥಾ ಸಂಕಲನ ಸೇರಿ 23 ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಆಶಯ, ಕಾಚಕ್ಕಿ, ಅಮಲ, ಕತ್ತಲೆಯ ಪ್ರೀತಿಗೆ, ಗಾಳಿ ಜೋಗುಳ, ಒಡಲ ಉರಿಯ ನೆನೆದು, ಬಂದೂಕಿಗೆ ಜೀವನವಿಲ್ಲ( ಕವನ ಸಂಕಲನಗಳು). ಬಾಪು ಪಾಪು, ರೈಲು ಗಾಡಿ, ಪುಟ್ಟಿಯ ಆಸೆ (ಮಕ್ಕಳ ಕವನ ಸಂಕಲನಗಳು),  ಸಿದ್ಧಿಪುರುಷ ...

READ MORE

Reviews

ಚಿಂತನೆಗೀಡು ಮಾಡುವ ಕವಿತೆಗಳು ತಮ್ಮ ಸುತ್ತಲಿನ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಸ್ವಭಾವಗಳಿಂದಲೇ ರೂಪುಗೊಂಡಿರಬಹುದಾದ ವರ್ತಮಾನ ಸಂದರ್ಭದ ಮನುಷ್ಯನ ವರ್ತನೆಯನ್ನು ಗಮನದಲ್ಲಿಟ್ಟು - ಕೊಂಡು ಕವಿ, ಅಕ್ಷರ ಸಿ. ಕಾಲಿಮಿರ್ಚಿ ಅವರು ಕವಿತೆಗಳನ್ನು ರಚಿಸುತ್ತಾರೆ. ಹೀಗಾಗಿಯೇ, ಅವರು ಇತ್ತೀಚೆಗಷ್ಟೇ ಹೊರ ತಂದಿರುವ ’ಒಡಲ ಉರಿಯ ನೆನೆದು' ಕವನ ಸಂಕಲನದಲ್ಲಿರುವ ಕವಿತೆಗಳು ಓದುಗರನ್ನು ಇನ್ನಿಲ್ಲದಂತೆ ಕಾಡುತ್ತವೆ. ಪ್ರಸ್ತುತ, ಈ ಕವನ ಸಂಕಲನದಲ್ಲಿರುವ ಕವಿತೆಗಳು ಈ ದಿನ ಮಾನಗಳಲ್ಲಿ ಮನುಷ್ಯ-ಮನುಷ್ಯರ ನಡುವೆ ಗೋಡೆ ನಿರ್ಮಿಸಲು ಕಾರಣವಾದ ಸ್ವಯಂ ಮನುಷ್ಯನೇ ರೂಪಿಸಿ ಕೊಂಡಿರುವ ಜಾತಿ, ಮತ, ಧರ್ಮಗಳು ಹೇಗೆ ನೆಮ್ಮದಿಯ ಬದುಕಿನ ಬೇರುಗಳನ್ನೇ ಸಡಿಲಗೊಳಿಸಿವೆ ಎಂಬುದನ್ನು ಹೇಳಿವೆ. ಈ ಸೃಷ್ಟಿಯ ಮೂಲವನ್ನೇ ತೋಧಿಸ ಬೇಕೆಂಬ ಹಪಹಪಿಯಲ್ಲಿ ಮನುಷ್ಯನೊಳಗೆ ತುಂಬಿರುವ ಘೋರ ಶೌರ್ಯದ ಬಗ್ಗೆ, ಬರೀ ರಾಗ-ದ್ವೇಷ ಅಸೂಯಗಳನ್ನು ತುಂಬಿಕೊಂಡು ಅಹಂ ಮಿಕೆಯಿಂದ ಮೆರೆಯುತ್ತಿರುವ ಬಗ್ಗೆ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ ಜನರು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅನುಭವಿಸುತ್ತಿರುವ ಯಾತನಾಮಯ ಬದುಕಿನ ಕುರಿತಾಗಿ ಓದುಗನೊಂದಿಗೆ ಸಂವಾದಕ್ಕೆ ಇಳಿಯುತ್ತವೆ. ಇಲ್ಲಿ, ಕವಿ ಅಕ್ಬರರು ತಮ್ಮ ಸುತ್ತಲಿನ ಎಲ್ಲ ವಿದ್ಯಮಾನಗಳೊಂದಿಗೆ ಮುಖಾಮುಖಿಯಾಗಬೇಕೆಂಬ ಉಮೇದಿಯಲ್ಲಿ ಕವಿತೆಗಳಿಗೆ ಕಾಣಿಸುವ ಗುಣವನ್ನು ಮೀರಿ ಕೇಳಿಸುವ ಗುಣ ಬಂದಿದೆ.

- ಕಲ್ಲೇಶ್ ಕುಂಬಾರ್, ರಾಯಭಾಗ ಬೆಳಗಾವಿ ಜಿಲ್ಲೆ

ಕೃಪೆ: ಹೊಸತು 2018 ಜನೆವರಿ

Related Books