ಖ್ವಾಬೀದ ಹಸೀನಾ

Author : ಶೋಭಾ ನಾಯಕ

Pages 48

₹ 50.00
Year of Publication: 2010
Published by: ಬೆಳದಿಂಗಳು ಪ್ರಕಾಶನ
Address: ಬೆಳಗಾವಿ
Phone: 9902130041

Synopsys

ಲೇಖಕಿ ಶೋಭಾ ನಾಯಕ ಅವರ ಕವನ ಸಂಕಲನ ‘ಖ್ವಾಬೀದ ಹಸೀನಾ. ಕೃತಿಗೆ ಮುನ್ನುಡಿ ಬರೆದ ಸರಜೂ ಕಾಟ್ಕರ್ ‘ಇಲ್ಲಿರುವ ಎಲ್ಲ ಕವಿತೆಗಳ ಆಶಯ ಪ್ರೀತಿಗೆ ಸಂಬಂಧ ಪಟ್ಟಿದೆ. ಶೋಭಾ ಅವರ. ಕೈಯಲ್ಲಿ ಅಕ್ಷರಗಳು ಪ್ರೀತಿಯಂತೆ ಕುಣಿಯುತ್ತವೆ. ಶಬ್ದಗಳು ಹೇಳುವುದನ್ನು ನೇರವಾಗಿ ಹೇಳುತ್ತವೆ; ಹೃದಯಕ್ಕೆ ಹೃದಯ ಹತ್ತಿರವಾಗಿ ಪ್ರೀತಿ ಭೋರ್ಗರೆತ, ಧುಮ್ಮುಕ್ಕಲಾರಂಭಿಸುತ್ತದೆ. ಶೋಭಾ ಅವರಲ್ಲಿ ಭಾವನೆಗಳ ಉತ್ಕಟ ನೆಲೆಯಿದೆ. ಆದರ್ಶ, ರಮ್ಯತೆ ಶೃಂಗಾರ, ಮಾನವೀಯತೆ, ನೆನಪುಗಳು-ಕನಸು-ಕನವರಿಕೆಗಳು ತುಂಬಿ ಕಾವ್ಯ ಒಂದು ಗತಿಯಲ್ಲಿ ಸಾಗುತ್ತ ಹೋಗುತ್ತದೆ. ಇಲ್ಲಿಯ ಪದ್ಯಗಳಲ್ಲಿ ಜಾನಪದೀಯ ಸೊಗಸಿದೆ. ಬೇಂದ್ರೆಯವರ ಕಾವ್ಯದಲ್ಲಿ ಬರುವ ಜಾನಪದ ಸೊಗಡಿನ ದಾರಿಯಲ್ಲಿ ಕವಯತ್ರಿ ಬಳಸುವ ಭಾಷೆ ದೇಸೀಯತೆಯಿಂದ ಕೂಡಿದ್ದರೂ ಆಧುನಿಕತೆಯ ಸ್ಪರ್ಶ ಕಳೆದುಕೊಂಡಿಲ್ಲ.’ ಎಂದು ಹೇಳಿದ್ದಾರೆ.

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books