ನಿರಿಗೆ

Author : ಸಬಿತಾ ಬನ್ನಾಡಿ

Pages 96

₹ 80.00




Published by: ಕವಿ ಪ್ರಕಾಶನ
Address: ಕವಲಕ್ಕಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ

Synopsys

ಸಬಿತಾ ಬನ್ನಾಡಿ ಅವರ ಚೊಚ್ಚಲ ಕವನ ಸಂಕಲನ ’ನಿರಿಗೆ’. ಈಗಾಗಲೇ ವಿಮರ್ಶೆ, ಅಂಕಣ ಮೊದಲಾದ ಪ್ರಕಾರಗಳಲ್ಲಿ ಕೈಯಾಡಿಸಿ ಯಶಸ್ವಿಯಾಗಿರುವ ಸಬಿತಾ ಅವರ ಕವಿತೆಗಳು ತನ್ನ ಹೊಸ ನೋಟಗಳ ಮೂಲಕ ವಿಮರ್ಶಕರ ಮತ್ತು ಸಹೃದಯ ಗಮನ ಸೆಳೆಯುತ್ತಿದೆ.   ಇಲ್ಲಿ 40ಕ್ಕೂ ಅಧಿಕ ಕವಿತೆಗಳಿದ್ದು, ಈ ಕವಿತೆಗಳನ್ನು ಮೂರು ಭಾಗವಾಗಿ ವಿಂಗಡಿಸಿದ್ದಾರೆ. ಮೊದಲ ಭಾಗದಲ್ಲಿ ಬದುಕಿನ ದಟ್ಟ ಚಿತ್ರಗಳಿದ್ದರೆ, ಎರಡನೆಯ ಭಾಗದಲ್ಲಿ ಸ್ವಕೇಂದ್ರಿತ ನೆಲೆಯಿಂದ ಚಿಮ್ಮಿ ಬಂದ ಪ್ರೇಮ ಕವಿತೆಗಳಿವೆ. ಹಾಗೆಯೇ ಮೂರನೇ ಭಾಗದಲ್ಲಿ ಕಿರು ಕವಿತೆಗಳ ಮೂಲಕ ದೊಡ್ಡದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಹೆಣ್ಣಿನ ಮೇಲೆ ನಡೆಯುವ ಶೋಷಣೆಯನ್ನೂ, ಪುರುಷಪ್ರಧಾನ ವ್ಯವಸ್ಥೆಯಿಂದ ಕಳಚಿಕೊಳ್ಳುವ ಆಕೆಯ ಅಸಹಾ ಯಕ ಪ್ರಯತ್ನವನ್ನೂ ಕವಿತೆಗಳು ಇಲ್ಲಿ ತೆರೆದಿಡುತ್ತವೆ. ತಮ್ಮ ಒಳ ಜಗತ್ತಿನ ಬೇರುಗಳನ್ನು ಬಗೆಯ ಹೊರಡುವ ಕವಿತೆಗಳು ಇನ್ನೊಂದು ಬಗೆಯವು. ಮೊದಲ ಬಗೆಯ ಕವಿತೆಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಮುಂಚೂಣಿಗೆ ಬಂದು ಕವಿತೆಗಳು ಆದಷ್ಟು ಪೊಲಿಟಿಕಲ್ ಕರೆಕ್ಸ್ ಆಗಲು ಯತ್ನಿಸುತ್ತದೆ. ಎರಡನೆಯ ಬಗೆಯ ಕವಿತೆಗಳಲ್ಲಿ ತಮ್ಮದೇ ಆದ ನುಡಿಯೊಂದನ್ನು ಹುಡುಕಲು ಮುಂದಾಗುತ್ತಾರೆ.

About the Author

ಸಬಿತಾ ಬನ್ನಾಡಿ

ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿ.ಎ ಪೂರ್ಣ ಗೊಳಿಸಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1988 ರಲ್ಲಿ ಪ್ರಥಮ ಸ್ಥಾನದಲ್ಲಿ ಎಂ.ಎ ಪದವಿಗಳಿಸಿದರು. ಆನಂತರ ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿ ಅಂತರ್ ಸಂಬಂಧಗಳು ವಿಷಯದಡಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಗಳಿಸಿದರು. ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆಯಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರು ಸಂವಾದ ಪತ್ರಿಕೆಯಲ್ಲಿ ...

READ MORE

Related Books