ಸ್ಮೋಕಿಂಗ್-ಝೋನ್

Author : ಎಚ್. ಎನ್. ಆರತಿ

Pages 80

₹ 80.00
Year of Publication: 2018
Published by: ಬಹುರೂಪಿ
Address: ನಾಕುತಂತಿ, ಬಸಪ್ಪ ಬಡಾವಣೆ ಆರ್.ಎಂ, ಎರಡನೇ ಹಂತ, ಸಂಜಯ ನಗರ ಬೆಂಗಳೂರು,
Phone: 7019182729 9945440841

Synopsys

ಕವಯತ್ರಿ ಎಚ್‌.ಎನ್‌. ಆರತಿಯವರ ಆರನೆಯ ಕೃತಿಯಿದು. ಕವಿ ಸಂಕಲನದಲ್ಲಿ “ಹೇಳುವಷ್ಟು ಹೇಳಿದ್ದೇನೆ. ಹೇಳಲಾಗದ್ದು ಬೇಕಾದಷ್ಟಿದೆ. ಹಾಗಾಗಿ, ಹೇಳಲು ಇನ್ನೂ ಎಷ್ಟೋ ಉಳಿಸಿಕೊಂಡಿದ್ದೇನೆ” ಎಂದು ಹೇಳುತ್ತಾರೆ.  ಈ ಕವನಸಂಕಲನದ ಪ್ರತಿ ಕವಿತೆಯಲ್ಲಿಯೂ ನಿಧಾನವಾಗಿ ತಾಳ್ಮೆಯಿಂದ ಹೆಣ್ಣಿನ ಮನಸ್ಸು ಬಿಚ್ಚಿಡುವ ಗುಣ ಕಾಣಿಸುತ್ತದೆ.

ಡಾ. ವಿನಯಾ ಅವರು ಈ ಸಂಕಲನದ ಕವಿತೆಗಳ ಬಗ್ಗೆ ’ಈ ಕವಿತೆಗಳ ಕೇಂದ್ರಪ್ರಜ್ಞೆಯಲ್ಲಿ ವರ್ತಮಾನದ ಹೆಣ್ಣು ಬದುಕಿದೆ. ಪುಟ್ಟಪೂರಾ ಬದಲಿದಂತೆ ಕಾಣುವ ವಿದ್ಯಮಾನಗಳ ಅಸಲಿಯತ್ತನ್ನ ನಾಜೂಕಾಗಿ ಹರಿಗಡಿಯದಂತೆ ಎಬ್ಬಿ ತಂದು ಎದುರಿಡುವ ತಾಕತ್ತಿದೆ. ಅತಿನಾಗರಿಕ ಜಗತ್ತಿನಲ್ಲಿ ವ್ಯಕ್ತಿಗಳ ಸೌಖ್ಯವನ್ನಳೆವ ಪ್ಯಾರಾಮೀಟರಿನ ಕಂಪನಾಂಕವನ್ನು ಆ ಪರಿಭಾಷೆಯಲ್ಲೇ ದಾಖಲಿಸಲಾಗಿದೆ’ ಎಂದು ಬರೆದಿರುವುದು ಕವಿತೆಗಳ ಸ್ವರೂಪವನ್ನು ಸಾರರೂಪದಲ್ಲಿ ಹೇಳಿದ ಹಾಗಿದೆ.

ತನಗೆ ತಾನೇ ಮೋಸ ಮಾಡಿಕೊಳ್ಳುವುದು ಕೇವಲ ಹುಡುಗಿಯರ ಜನಸಿದ್ದ ಹಕ್ಕು ಎಂಬ ವಿಡಂಬನೆ ಈ ಪುಸ್ತಕದ ಕೇಂದ್ರದಲ್ಲಿದೆ. ದಿಕ್ಕುಪಾಲಾದ ಮುರಿದ ಜಂಟಿ ಶಬ್ದಗಳು ಅಲೆ ಅಲೆಯಾಗಿ ಕೇಳಿಸುತ್ತವೆ. ಇದು ಮಾಯದಲ್ಲಿ ಮೂಡಿದ ಮೋಹಕ ಬಿಂಬ. ಇದೊಂದು ಕಾವ್ಯದ ಸೆಲ್ಫಿ ಏನನ್ನೂ ಹೇಳದೆ ಎಲ್ಲವನ್ನೂ ಹೇಳುವ ಕಲೆಗಾರಿಕೆ ಇಲ್ಲಿದೆ.

 

About the Author

ಎಚ್. ಎನ್. ಆರತಿ
(13 November 1966)

ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಎನ್‌. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ.  ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ. ಸಮಕಾಲೀನಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸುವ ಇವರು ಅನುವಾದಕ್ಕೂ ಆಗಾಗ ಭೇಟಿ ...

READ MORE

Awards & Recognitions

Related Books