ಪನ್ನೀರು - ಹನಿಗವಿತೆಗಳು

Author : ಪರಮೇಶ್ವರಪ್ಪ ಕುದರಿ

Pages 116

₹ 100.00
Year of Publication: 2020
Published by: ಹರಿ ಪ್ರಕಾಶನ
Address: ಮಾಸ್ತಮ್ಮ ಬಡಾವಣೆ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ - 577501

Synopsys

ಕವಿ, ಸಾಹಿತಿ ಪರಮೇಶ್ವರಪ್ಪ ಕುದರಿ ಅವರ ಕೃತಿ -ಪನ್ನೀರು. (ಹನಿಗವಿತೆಗಳ ಸಂಕಲನ).  ಒಟ್ಟು 300 ಹನಿಗವಿತೆಗಳಿವೆ. ಕೃತಿಗೆ ಬೆನ್ನುಡಿ ಬರೆದ ವೈ.ಬಿ.ಎಚ್. ಜಯದೇವ್, ’ಪನ್ನೀರು' ಮಧುರ ಭಾವಗಳ ಸಿಂಚನದ ಜೇನ್ನೊಡ. ಇಲ್ಲಿ ಬೆಳದಿಂಗಳ ಪ್ರೀತಿಯಿದೆ. ಬಿಸಿಯುಸಿರಿನ ತಹತಹವಿದೆ. ತಣ್ಣಗೆ ಉರಿಯುವ ಹಣತೆಗಳಿವೆ. ಲಾವಾ ರಸ ಸಿಡಿಸುವ ಜ್ವಾಲಾಮುಖಿಗಳೂ ಇವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಪರಮೇಶ್ವರಪ್ಪ ಕುದರಿ
(15 April 1964)

ಲೇಖಕ ಪರಮೇಶ್ವರ ಕುದರಿ ಅವರು ಮೂಲತಃ ಧಾರವಾಡ ತಾಲೂಕು ಹೆಬ್ಬಳ್ಳಿಯವರು. ಕೃತಿಗಳು: ಕೋತಿ ಮತ್ತು ಫೋನು, ಬಗೆ ಬಗೆ ಆಟ, ಪುಟ್ಟು ಬೇಡಿದ ವರ, ಕೈಲಾಸದಲ್ಲಿ ಕ್ರಿಕೆಟ್, ಮಾತು-ಮುತ್ತು. ಇವರ ಬಗೆ ಬಗೆ ಆಟ’ ಕೃತಿಗೆ ರುಕ್ಮಿಣಿಬಾಯಿ ಸ್ಮಾರಕ ರಾಜ್ಯ ಪ್ರಶಸ್ತಿ, ’ದುರ್ಗದ ಸಿರಿ’ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗುರು ಪುರಸ್ಕಾರ, ’’ಕನ್ನಡ ಸಾಹಿತ್ಯ ಸಾಗರದ ವಿದ್ಯಾ ರತ್ನ’  ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.  ...

READ MORE

Related Books