'ನೋವಿಗೂ ಇದೆ ಚಲನೆ' ಹೇಮಾ ನಾಯಕ ಅವರ ಕವನ ಸಂಕಲನ. ಇಲ್ಲಿ ಸ್ತ್ರೀಸಂವೇದನೆಯ 45 ಕವಿತೆಗಳು ಸಂಕಲನದೊಳಗಡೆ ಅಡಕವಾಗಿವೆ. ಹಿರಿಯ ಕವಿ ವಾಸುದೇವ ನಾಡಿಗ ಅವರು ತೀರ್ಪುಗಾರರಾಗಿ ಬರೆದಿರುವ ಮಾತುಗಳನ್ನು ಸಂಗ್ರಹದಲ್ಲಿ ನೀಡಲಾಗಿದೆ. ಬೆನ್ನುಡಿಯಲ್ಲಿ ಕವಿತೆಯ ಬಗ್ಗೆ ಹಲವು ವಿಚಾರಗಳನ್ನು ದಾಖಲಿಸಿದ್ದಾರೆ. ಈ ಕೃತಿಯು ಹಸ್ತಪ್ರತಿ ಬಹುಮಾನವನ್ನು ಬೆರಗು ಪ್ರಕಾಶನ ಸಂಸ್ಥೆಯುವರು ನೀಡಿದ್ದಾರೆ
ಹೇಮಾ ನಾಯಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜನಿಸಿದರು. ತಂದೆ ಶಾಂತಾರಾಮ ನಾಯಕ, ತಾಯಿ ರಾಜಮ್ಮಾ ನಾಯಕ. ಸಾಹಿತ್ಯದಲ್ಲಿ ಅವರಿಗೆ ಅಪಾರ ಆಸಕ್ತಿಯಿದ್ದು, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ 2023ರಲ್ಲಿ ಮೂರನೇ ಬಹುಮಾನವನ್ನು ಪಡೆದಿದ್ದಾರೆ. ಶಾಲಾ ಮತ್ತು ಪದವಿ ಶಿಕ್ಷಣವನ್ನು ಊರಿನಲ್ಲಿ ಪೂರೈಸಿದ ಬಳಿಕ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ (ಭೌತಶಾಸ್ತ್ರ) ಅಧ್ಯಯನ. ಇವರು 2020ರಲ್ಲಿ ಮೇಘಾಲಯ ರಾಜ್ಯದ ಚಿರಾಪುಂಜಿಯಲ್ಲಿ Sub-divisional officer ಆಗಿ ಕೆಲಸಕ್ಕೆ ಸೇರಿದ್ದಾರೆ. ...
READ MORE