ಹೆಣ್ಣಾಲದ ಮರ

Author : ಸುಮತಿ ಕೃಷ್ಣಮೂರ್ತಿ

Pages 96

₹ 120.00




Year of Publication: 2023
Published by: ವಿವಿದ್ ಲಿಪಿ
Address: ಮೂಕ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್, ವೆಂಕಟಾದ್ರಿ ಅಪಾರ್ಟ್ಮೆಂಟ್, ಬ್ರಾಹ್ಮಣ ಸಭಾದ ಹತ್ತಿರ, ಎಮ್ಮಿಕೇರಿ, ಮಾಳಮಡ್ಡಿ, ಧಾರವಾಡ- 580007
Phone: 9535015489

Synopsys

‘ಹೆಣ್ಣಾಲದ ಮರ’ ಸುಮತಿ ಕೃಷ್ಣಮೂರ್ತಿ ಅವರ ಕವನ ಸಂಕಲನ. ಈ ಕೃತಿಗೆ ಚಿಂತಕರು ಹಾಗೂ ಕವಿಗಳಾದ ಸತ್ಯೇಶ್ ಎನ್ ಬೆಳ್ಳೂರ್ ಬೆನ್ನುಡಿ ಬರೆದಿದ್ದಾರೆ. ಸಂಕಲನದ ಕುರಿತು ಬರೆಯುತ್ತಾ ‘ಹಿಂದೆಂದೂ ಇರದಷ್ಟು ಕವಿಗಳು, ಕವಯಿತ್ರಿಯರು ಕಳೆದ ಐದಾರು ವರ್ಷಗಳಲ್ಲಿ ನಮ್ಮ ನಡುವೆ ಕಂಡುಬರುತ್ತಾರೆ. ಅದಕ್ಕೆ ಮೂಲಕಾರಣ - ಸಾಮಾಜಿಕ ಜಾಲತಾಣಗಳು. ಕಾವ್ಯ ಎಲ್ಲರಿಗೂ ಸುಮ್ಮನೆ ಒಲಿಯುವುದಿಲ್ಲವೆಂಬ ಸತ್ಯವನ್ನು ಮೀರಿ ನಾನು ಕವಿಯಾಗಲೇಬೇಕು ಎಂಬ ಹಠಕ್ಕೆ ಜಾರಿ ಬರೆಯುವವರ ಈ ಮಹಾಪೂರದಲ್ಲಿ, ಸ್ಪುರಣೆಗೆ ಮಾತ್ರ ಒಲಿದು ಅಂತರಂಗವನ್ನು ಮನಮಿಡಿವ ಹಾಗೆ ಕವನವಾಗಿಸಬಲ್ಲ ಮಂದಿ ಬೆರಳೆಣಿಕೆಯಷ್ಟು. ಅಂತಹವರಲ್ಲಿ ಸುಮತಿ ಕೃಷ್ಣಮೂರ್ತಿ ಅವರು ಅಗ್ರಗಣ್ಯರು.

ಸುಮ್ಮನೇ ದಕ್ಕುವುದಿಲ್ಲ ಕವಿತೆ
ಹಾದಿಬದಿಯ ಬೇಲಿಹೂಗಳಂತೆ
ಸುಮ್ಮನೇ ದಕ್ಕುವುದಿಲ್ಲ ಕವಿತೆ
ತೋಟದಂಚಿನಲ್ಲಿ ಕೈಗೆಟಕುವ ಬೋರೆಹಣ್ಣಿನಂತೆ…

ಸುಮತಿ ಅವರ ಕವನವೊಂದರ ಈ ಸಾಲುಗಳು ಅದೆಷ್ಟು ನಿತ್ಯಸತ್ಯವಲ್ಲವೇ? ಇಂತಹ ಅನೇಕ ಮನೋಜ್ಞವಾದ ಕಾವ್ಯಪಂಕ್ತಿಗಳು ಈ ಸಂಕಲನದಲ್ಲಿ ಹೇರಳವಾಗಿವೆ…

ಬೊಗಸೆಯಷ್ಟು ಬಾನು ಮಾತ್ರ ನನಗೆ ಬೇಕಿದೆ
ಅಲ್ಲಿ ನಾನು ಕನಸಬೀಜ ಬಿತ್ತಬೇಕಿದೆ
ತಾರೆಗಳನು ತುದಿಬೆರಳಲಿ ಮುಟ್ಟಬೇಕಿದೆ
ಚಂದಿರನ ಕೆನ್ನೆ ಸೋಕಿ ಹೊಳೆಯಬೇಕಿದೆ

ಸುಮತಿ ಅವರ ಪದಗಳಾಟದಲ್ಲಿ ಪ್ರೀತಿ ಇದೆ, ನೀತಿ ಇದೆ, ವಿರಹದ ಅಳಲಿನ ಜೊತೆಯೇ ತುಂಟತನದ ಬಿಳಲಿದೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಕಾವ್ಯರಚನೆಯಲ್ಲಿ ಮೀಯುತ್ತಲೇ ಒಂದು ದಿನ ಚಂದಿರನ ಕೆನ್ನೆ ಸೋಕಿಸಬೇಕೆಂಬ ಉತ್ಕೃಷ್ಟವಾದ ಬಯಕೆ ಇದೆ. ಒಟ್ಟಾರೆ ಭಾವಸದ್ಭಾವಗಳ ಮಿಲನವಿದೆ. ನಿನ್ನೆಗಳ ಹಳೆಪದಕೆ ವಿದಾಯ ಹೇಳುತ್ತಾ ನಾಳೆಗಳ ಹಾಡಿಗೆ ಹೊಸರಾಗಬೆಸೆಯುತ್ತಾ ಇಂದು ಈ ಕ್ಷಣದಲ್ಲಿ ಸಂಪೂರ್ಣ ಬದುಕಿಬಿಡುವ… ಸುಮತಿ ಅವರು ಇನ್ನೂ ಹೆಚ್ಚು ಬರೆಯಲಿ ಹಾಗೂ ಬರೆಯುವ ಆ ಎಲ್ಲ ಹೊತ್ತಿನಲ್ಲಿಯೂ ಸಂಪೂರ್ಣ ಬದುಕಿಬಿಡಲಿ ಎಂದು ತುಂಬುಮನದಿಂದ ಹಾರೈಸಿದ್ದಾರೆ.

About the Author

ಸುಮತಿ ಕೃಷ್ಣಮೂರ್ತಿ

ಸುಮತಿ ಕೃಷ್ಣಮೂರ್ತಿ ಅವರು ಬಳ್ಳಾರಿ ಜಿಲ್ಲೆ ನಿವಾಸಿ. ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆದಿರುತ್ತಾರೆ. ಹವ್ಯಾಸಿ ಕವಯಿತ್ರಿ. ಕಾರ್ಯಕ್ರಮ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ...

READ MORE

Related Books