ನನ್ನ ನಿನ್ನ ನಡುವೆ

Author : ನರೇಂದ್ರ ಕಬ್ಬಿನಾಲೆ

Pages 222




Year of Publication: 2024
Published by: ಹೊಸ ಸಂಜೆ ಪ್ರಕಾಶನ
Address: ಕಾರ್ಕಳ- 574104
Phone: 9845939051

Synopsys

`ನನ್ನ ನಿನ್ನ ನಡುವೆ’ ಕೃತಿಯು ನರೇಂದ್ರ ಕಬ್ಬಿನಾಲೆ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಮನುಷ್ಯ ಸಂಘ ಜೀವಿ. ಅದಕ್ಕೂ ಮೀರಿ ಮನುಷ್ಯ ಸುತ್ತಮುತ್ತಲಿನ ಗಾಳಿ ನೀರು ಬೆಳಕು ಪ್ರಕೃತಿ ಮುಂತಾದವುಗಳೊಡನೆ ಬೆರೆತು ಬದುಕಬೇಕಾಗಿರುವುದು ನಿತ್ಯ ಸತ್ಯ. ಹೇಗೆ ಒಂದಲ್ಲ ಒಂದು ರೀತಿಯಿಂದ ಬಾಂಧವ್ಯದ ಕೊಂಡಿಯೊಂದಿಗೆ ಬೆಸೆದು ಮೂಡುವ ಭಾವವೇ ನಾನು ಮತ್ತು ನೀನು. ನೀನೆನ್ನುವುದು ಯಾರ ಪ್ರತಿರೂಪವು ಆಗಬಹುದು. ಗೆಳೆಯ, ಗೆಳತಿ, ಸಹೋದರ ಸಹೋದರಿ, ತಂದೆ ತಾಯಿ ಸಂಬಂಧಿಕರು, ದೇವರು ಇತ್ಯಾದಿ ಇತ್ಯಾದಿ...! ಹೀಗೆ ಹಲವಾರು ವಿಚಾರಗಳು ಈ ಕೃತಿಯು ಕಟ್ಟಿಕೊಡುತ್ತದೆ.

About the Author

ನರೇಂದ್ರ ಕಬ್ಬಿನಾಲೆ

ನರೇಂದ್ರ ಕಬ್ಬಿನಾಲೆ ಅವರು ವಾಣಿಜ್ಯದಲ್ಲಿ ಪದವಿ, ಹಣಕಾಸು ವಿಷಯದಲ್ಲಿ ಎಂಬಿಎ ಮತ್ತು ಹಣಕಾಸು ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಹೊಂದಿದ್ದಾರೆ. ಚಲನಚಿತ್ರೋದ್ಯಮದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ನಿರ್ಮಾಣ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಕಥೆ ಬರವಣಿಗೆ, ಸಾಹಿತ್ಯ ಮತ್ತು 7 ವಿವಿಧ ಭಾರತೀಯ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿರುವ ಅವರು ರಂಗಭೂಮಿ ಹಿನ್ನೆಲೆಯೊಂದಿಗೆ ಅನೇಕ ನಾಟಕಗಳು ಮತ್ತು ಕನ್ನಡ ಚಲನಚಿತ್ರಗಳು ಮತ್ತು ವೆಬ್‌ಸರಣಿಗಳಲ್ಲಿ ನಟಿಸಿದ್ದಾರೆ. ಅಷ್ಟೇಅಲ್ಲದೆ ಅನೇಕ ಭಕ್ತಿ ಮತ್ತು ಭಾವಗೀತೆಗಳು ಮತ್ತು ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಕೃತಿಗಳು: ನನ್ನ ನಿನ್ನ ನಡುವೆ(ಕವನ ಸಂಕಲನ) ...

READ MORE

Related Books