ಮರೆತ ಮಾತು

Author : ಡಿ.ಎಸ್‍. ರಾಮಸ್ವಾಮಿ

Pages 68

₹ 45.00
Year of Publication: 2002
Published by: ಸಂಚಯ ಪ್ರಕಾಶನ
Address: ನಂ-100, 2ನೇ ಮುಖ್ಯರಸ್ತೆ, 6ನೇ ಬ್ಲಾಕ್, 3ನೇ ಸ್ಟೇಜ್, 3ನೇ ಸ್ಪೇಸ್, ಬನಶಂಕರಿ, ಬೆಂಗಳೂರು, 560085
Phone: 26791925

Synopsys

‘ಮರೆತ ಮಾತು’ ಡಿ. ಎಸ್‌. ರಾಮಸ್ವಾಮಿ ಅವರ ಕವನ ಸಂಕಲನವಾಗಿದೆ. ಮಾತು- ಚಿಂತನೆ-ಗ್ರಹಿಕೆಯಲ್ಲಿ ಹೊಸತನವನ್ನು ಮೈಗೂಡಿಸಿಕೊಂಡು ಎಲ್ಲಿಯೂ ಹಿಂದೆ ಬೀಳದೆ ಅನುಭವಗಳನ್ನು ದಟ್ಟವಾಗಿ ಹೆಣೆದ ಕವಿತೆಗಳಿವು.

ಹೊಸ ವಿಷಯಗಳತ್ತ ಮುನ್ನುಗ್ಗುವ ಮನಸ್ಸಿನ ವೇಗಕ್ಕೆ ತಕ್ಕ ನಡಿಗೆಯನ್ನು ಹೊಂದಿಸದೆ ಸೋಲುವ ಮನುಷ್ಯನ ಅಸಹಾಯಕತೆಯನ್ನು ಚಿತ್ರಿಸುತ್ತವೆ.

About the Author

ಡಿ.ಎಸ್‍. ರಾಮಸ್ವಾಮಿ
(20 May 1965)

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 1965 ಮೇ 20ರಂದು ಶಿಕ್ಷಕ ಡಿ. ಶ್ರೀನಿವಾಸರಾವ್ ಮತ್ತು ಗಿರಿಜಮ್ಮ ದಂಪತಿಗಳ ಮೊದಲ ಮಗನಾಗಿ ಜನಿಸಿದರು. ತರೀಕೆರೆ, ಭದ್ರಾವತಿ, ಶಿವಮೊಗ್ಗೆಗಳಲ್ಲಿ ವಿದ್ಯಾಭ್ಯಾಸ, ವಾಣಿಜ್ಯದಲ್ಲಿ ಪದವಿ, ಕನ್ನಡ ಎಂಎ, ವಿಮೆ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲಮೋ, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1994ರಿಂದ ಅರಸೀಕೆರೆ ನಿವಾಸಿ. 'ಮರೆತ ಮಾತು' (2002) (ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ಕಾವ್ಯ ಪ್ರಶಸ್ತಿ ಪಡೆದ ಕೃತಿ), 'ಉಳಿದ ಪ್ರತಿಮೆಗಳು (2007) (ಹಸ್ತಪ್ರತಿಗೆ ಕನ್ನಡ ಕಾವ್ಯ ಸಂದರ್ಭದ ಪ್ರತಿಷ್ಠಿತ ...

READ MORE

Reviews

ಹೊಸತು- ಮೇ -2003

ಹೊಸ ಹುಮ್ಮಸ್ಸಿನ ಯುವ ಪ್ರತಿಭೆಯೊಂದರ ಲವಲವಿಕೆಯ ಪರಿಚಯ ಕವಿತೆಗಳ ಮೂಲಕ ನಿಮಗಾಗಬಹುದು. ಮಾತು- ಚಿಂತನೆ-ಗ್ರಹಿಕೆಯಲ್ಲಿ ಹೊಸತನವನ್ನು ಮೈಗೂಡಿಸಿಕೊಂಡು ಎಲ್ಲಿಯೂ ಹಿಂದೆ ಬೀಳದೆ ಅನುಭವಗಳನ್ನು ದಟ್ಟವಾಗಿ ಹೆಣೆದ ಕವಿತೆಗಳಿವು. ಹೊಸ ವಿಷಯಗಳತ್ತ ಮುನ್ನುಗ್ಗುವ ಮನಸ್ಸಿನ ವೇಗಕ್ಕೆ ತಕ್ಕ ನಡಿಗೆಯನ್ನು ಹೊಂದಿಸದೆ ಸೋಲುವ ಮನುಷ್ಯನ ಅಸಹಾಯಕತೆಯನ್ನು ಚಿತ್ರಿಸುತ್ತವೆ. ನೀರಿನ ಬುಗ್ಗೆ ಚಿಮ್ಮಿದಂತೆ ಕವಿಯ ಮನಸ್ಸಿನಿಂದ ನೇರ ಮಾತು ಮೂಡಿಬಂದಿದೆ.

Related Books