ವಿಜಿಲುಗಳು

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 38

₹ 40.00




Year of Publication: 2004
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಘಟಕ, ಸಿರುಗುಪ್ಪ

Synopsys

ಅಂತರಂಗದ ಗೆಳತಿಯೊಂದಿಗೆ ನಡೆಸಿದ ಸಂವಾದದಂತಿರುವ ವಿಜಲುಗಳು ನಮ್ಮವೂ ಆಗಿಬಿಡುತ್ತವೆ. ಜಾಜಿಯವರ ಕೃತಿಯಲ್ಲಿ ಅಭಿವ್ಯಕ್ತವಾಗಿರುವ ಭಾವ ತೀವ್ರತೆ, ರೂಪಕಗಳು ಪ್ರೀತಿಸುವ ಹೃದಯಗಳನ್ನು ತಟ್ಟುತ್ತವೆ. ಪ್ರೀತಿಯಿಲ್ಲದೇ ಏನನ್ನು ಮಾಡಲಾರ, ದ್ವೇಷವನ್ನು ಕೂಡ ಎನ್ನುತ್ತಾ ಸತೀಶ್‌ ಪಾಟೀಲ್‌ ಜಾಜಿ ದೇವೇಂದ್ರಪ್ಪ ಅವರ ಕವಿತೆಗಳೊಳಗಿನ ಭಾವ ಏನಿದೆ ಎಂಬುದನ್ನು ವಿವರಿಸಿದ್ದಾರೆ. 

’ಪ್ರಿಯತಮೆಗೆ ತನ್ನ ಪ್ರೇಮವನ್ನು ಅರಿಕೆ ಮಾಡುವ ನಿಟ್ಟಿನಲ್ಲಿ ಕವಿ ಬಳಸಿರುವ ರೂಪಕಗಳಲ್ಲಿ ಹೊಸತನದ ಕಲ್ಪನೆಗಳಿವೆ. ಗರುಡ-ಸರ್ಪ, ಬಾನು-ಭೂಮಿ, ಕರಿ-ಕನ್ನಡ ಇವೆಲ್ಲಾ ಈಗಾಗಲೇ ಬಳಕೆಯಲ್ಲಿಯರುವ ಕಲ್ಪನಾ ಚಿತ್ರಗಳಾಗಿವೆ. ಆದರೆ ಈ ಕವನ ಸಂಕಲನದಲ್ಲಿ ಬಳಸಿದರುವ ರಂಗಭೂಮಿಯ ಚಿತ್ರ, ರೋಹಿಣಿ ಮಳೆ ಓಣಿತುಂಬಾ ಜೋಳತುಂಬುವ ರೈತನ ಚಿತ್ರ ಇವೆಲ್ಲಾ ವಿಭನ್ನವಾಗಿದ್ದು, ಹೊಸತನವನ್ನು ತೋರಿಸುತ್ತವೆ’ ಎನ್ನುತ್ತಾರೆ ಬರಹಗಾರ ರಹಮತ್‌ ತರೀಕೆರೆಯವರು. ಗಜಲ್‌ಗಳ ರೂಪದಲ್ಲಿರುವ ವಿಜಲ್‌ಗಳು ನಿಮ್ಮನ್ನು ಸೆಳೆಯಬಹುದಾದ ಕವನ ಸಂಕಲನವಾಗಿದೆ.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books