ಚೆಲುವನ ಪದ್ಯಗಳು

Author : ಎನ್.ಪಿ.ಕೋಡಬಾಳ

Pages 64

₹ 100.00




Year of Publication: 2022
Published by: ದೀಪು ಪ್ರಕಾಶನ
Address: ಶಬರಿ ನಗರ, ಬಿ ಬ್ಲಾಕ್‌, ರಾಣೇಬೆನ್ನೂರ, ಹಾವೇರಿ- 581 115

Synopsys

ಲೇಖಕ ಎನ್.ಪಿ. ಕೋಡಬಾಳ ಅವರ ಕವನ ಸಂಕಲನ ಕೃತಿ ʻಚೆಲುವನ ಪದ್ಯಗಳುʼ. ಪುಸ್ತಕದ ಮುನ್ನುಡಿಯಲ್ಲಿ ಹಾನಗಲ್ಲದ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ. ಬೇವಿನಮರದ ಅವರು, “ಯುವ ಸಾಹಿತಿ ನಿಂಗಪ್ಪ ಕೋಡಬಾಳ ಅವರು ಪೋಲಿಸ್ ವೃತ್ತಿಯಲ್ಲಿದ್ದುಕೊಂಡು, ತಮ್ಮ ಕರ್ತವ್ಯಕ್ಕೆ ಚ್ಯುತಿ ತರದೇ ಜೀವನದ ಅನುಭವಗಳನ್ನು ಕವನಗಳಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡ ನಾಡು, ದೇಶ, ಸಾಮಾಜಿಕ ಸಂಗತಿಗಳು, ಸ್ತ್ರೀಪರ ಕಾಳಜಿ, ಕಾಲೇಜಿನ ಬದುಕು, ಹಬ್ಬದ ಸಡಗರ, ದೈವ, ಭಕ್ತಿ - ಹೀಗೆ ಅನೇಕ ಸಂಗತಿಗಳಿಂದ ಸೃಜನೆಗೊಂಡ ವಿಚಾರಗಳನ್ನು ತಮ್ಮ ಕವನಗಳಲ್ಲಿ ಬಿತ್ತಿ ಬೆಳೆದಿದ್ದಾರೆ. ಅವರ ಪದ್ಯಗಳು ಅತ್ಯಂತ ಸರಳವೆನಿಸಿದರೂ ಅರ್ಥವತ್ತಾಗಿ ಮೂಡಿಬಂದಿವೆ. ಕನ್ನಡ ನಾಡಿನ ಮಹತ್ವವನ್ನು ವಿಜೃಂಭಿಸಿರುವ ಎನ್.ಪಿ. ಕೋಡಬಾಳ ಅವರ 'ಚೆಲುವ ಕನ್ನಡ ನಾಡು' ಕವನದಲ್ಲಿನ ಪ್ರತಿಯೊಂದು ಪದ್ಯಗಳೂ ಕೆ.ಎಸ್. ನಿಸಾರ್ ಅಹ್ಮದ್ ಅವರ 'ಜೋಗದ ಸಿರಿ ಬೆಳಕಿನಲ್ಲಿ' ಎನ್ನುವ ಗೀತೆಯನ್ನು ನೆನಪಿಸುವಂತಿವೆ ಎಂದಿದ್ದಾರೆ. ಪುಸ್ತಕವು 32 ಕವನಗಳನ್ನು ಹೊಂದಿವೆ.

About the Author

ಎನ್.ಪಿ.ಕೋಡಬಾಳ
(15 October 1982)

ಎನ್.ಪಿ.ಕೋಡಬಾಳ ಹಾವೇರಿ ಮೂಲದವರು. ಇವರ ಪೂರ್ತಿ ಹೆಸರು ನಿಂಗಪ್ಪ ತಂದೆ ಪುಟ್ಟಣ್ಣ ಕೋಡಬಾಳ. ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರನಾಗಿರುವ ಇವರು, ಪ್ರಸ್ತುತ ಹಾವೇರಿಯ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಡಿ.ಎಸ್.ಬಿ ವಿಭಾಗದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿ: ಚೆಲುವ ಪದ್ಯಗಳು ...

READ MORE

Related Books