ಬಾಬಾಬುಡನ್‌ಗಿರಿ

Author : ಶಿವರಾಮಯ್ಯ

Pages 100

Synopsys

'ಬಾಬಾ ಬುಡನ್ ಗಿರಿ' ಕವನ ಸಂಗ್ರಹದಲ್ಲಿರುವ ಪದ್ಯಗಳ  ಧ್ವನಿ ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದ್ದು. ಲೂಟಿ ಕೋರ ಸಾಮ್ರಾಜ್ಯಶಾಹಿ ಶಕ್ತಿಗಳು ಯುದ್ದವನ್ನೆ ಉದ್ಯಮವನ್ನಾಗಿಸಿಕೊಂಡು ಬದುಕುತ್ತಿವೆ. ಕೋಮುಗಲಭೆ ಮತ್ತು ಭಯೋತ್ಪಾದನೆ ಜನರನ್ನು ಭೀತಿಗೊಳಿಸುತ್ತಿವೆ. ಜಡ ವ್ಯವಸ್ಥೆಯನ್ನು ಪ್ರಶ್ನಿಸುವವರನ್ನೆಲ್ಲ ಅಧಿಕಾರ ಶಕ್ತಿಗಳು ಗುಮಾನಿಯಿಂದ ನೋಡುತ್ತಿವೆ. ಅದರ ದುರ್ಲಾಭ ಪಡೆದ ಪೊಲೀಸ್ ಪಡೆ ಎನ್‌ಕೌಂಟರ್ ನೆಪ ಹೇಳುತ್ತ ಟ್ರಿಗರ್ ಖುಷಿ ಅನುಭವಿಸುತ್ತಿದೆ.

ಇಂಥಲ್ಲಿ ದುಃಖಾರ್ತರ ಹೆಣ್ಣು ಮಕ್ಕಳ ಮಾನ-ಪ್ರಾಣಗಳಿಗೆ ಕವಡೆ ಕಿಮ್ಮತ್ತೂ ಇಲ್ಲವಾಗಿದೆ. ಆದರೆ ಹಾಗೆಂದು ಕೈಕಟ್ಟಿ ಕೂರುವ ಸಮಯ ಇದಲ್ಲ. ಯುದ್ಧಕೋರರು ಸಮಾಜಘಾತುಕರು ಬರುತ್ತಲೇ ಇರುತ್ತಾರೆ, ಶಾಂತಿ ಪ್ರಿಯರು ಅವರನ್ನು ಹಿಮ್ಮೆಟ್ಟಿಸುತ್ತಲೇ ಇರುತ್ತಾರೆ. ಇದು ನೆನ್ನೆ ಮೊನ್ನೆಯದಲ್ಲ, ನಾಳೆ ನಾಡಿದ್ದರಲ್ಲಿ ಕೊನೆಗೊಳ್ಳುವುದೂ ಇಲ್ಲ. ಇದು ನಿರಂತರ ಮಾನವ ಇತಿಹಾಸ ಈ ಹಿನ್ನೆಲೆಯಲ್ಲಿ ಮೂಡಿದ ಕೆಲವು ರಚನೆಗಳು ಇವು.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books