ನಿಜ ಸ್ವಪ್ನ

Author : ಎಚ್‌.ಆರ್‌. ರಮೇಶ

Pages 88

₹ 80.00




Year of Publication: 2013
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 9480353507

Synopsys

ಲೇಖಕ ಎಚ್.‌ ಆರ್.‌ ರಮೇಶ ಅವರ ನಾಲ್ಕನೇ ಕವನ ಸಂಕಲನ ʼನಿಜ ಸ್ವಪ್ನʼ. ಪುಸ್ತಕಕ್ಕೆ ಮುನ್ನುಡಿ ಬರೆದ ಹಿರಿಯ ಚಿಂತಕರಾದ ಜಿ. ರಾಜಶೇಖರ್‌, ಎಚ್‌ ಆರ್‌ ಆರ್‌ ರಮೇಶ್‌ ಅವರ ಈ ಕವನ ಸಂಕಲನದ ಒಂದು ಕವಿತೆಯ ಶೀರ್ಷಿಕೆ ʼಅದರ ಸುತ್ತʼ. ಸಂಕಲನದಲ್ಲಿ ʼಅವುʼ, ʼಅದುʼ, ʼಇವುʼ, ಮತ್ತು ʼಅವುʼ ಎಂಬ ಕವಿತೆಗಳೂ ಇವೆ. ಏನನ್ನೋ, ಯಾರನ್ನೋ ಕುರಿತು ಹೇಳುವ, ಆದರೆ, ಏನು, ಯಾರು ಎಂದು ಒಮ್ಮೊಮ್ಮೆ ಹೊಳೆದು, ಒಮ್ಮೊಮ್ಮೆ ಅಸ್ಪಷ್ಟವಾಗಿ ಭಾಸವಾಗುವ, 'ಆದು', 'ಆದರ', 'ಅವನು ಮತ್ತು ಅವನು' – ಇಂತಹ ಪ್ರಯೋಗಗಳೂ ಅವರ ಕವಿತೆಗಳಲ್ಲಿ ಅಪರೂಪವಲ್ಲ, ಯಾಕೆ ಕವಿ ನಮಗೆ ಅರ್ಥವಾಗುವ ಹಾಗೆ ಖಚಿತವಾಗಿ ಮಾತಾಡುವುದಿಲ್ಲ? ಯಾಕೆ ಅವರು ಸದಾ ಸಂದೇಹದಲ್ಲಿ ತೊಳಲಾಡುತ್ತಾರೆ? ಮೇಲೆ ಹೇಳಿದ `ಅದರ ಸುತ್ತ' – ಕವಿತೆಯ ಮೊದಲ ಸಾಲುಗಳಲ್ಲಿಯೇ ಈ ಬಗೆಯ ಅಸ್ಪಷ್ಟ ಪದಪ್ರಯೋಗ ಕವಿಗೆ ಯಾಕೆ ಅನಿವಾರ್ಯವಾಗಿದೆ ಎಂಬುದರ ವಿವರಣೆ ಇದೆ. ಕಾಲದ ನಿರಂತರ ಚಲನಶೀಲತೆ ಮತ್ತು ಪರಿವರ್ತನ ಶೀಲತೆಗಳಲ್ಲಿ ಸತ್ಯವೆಂದರೆ ಏನು? ಅನುಭವವೆಂದರೆ, ಏನು? ಅನುಭವಿಸಿದ ಸತ್ಯ ಭಾಷೆಯಲ್ಲಿ ಮೈದಳೆಯುವ ಬಗೆ ಹೇಗೆ? ರಮೇಶ ಅವರ ಪ್ರಸ್ತುತ ಸಂಕಲನ ನಿಜಸ್ವಪ್ನದ ಕವಿತೆಗಳು ಈ ಚಿರಂತನ ಪ್ರಶ್ನೆಗಳನ್ನೇ ಬೇರೆಬೇರೆ ವರಸೆಗಳಲ್ಲಿ ಕೇಳುತ್ತವೆ; ತಮಗೆ ತಾವೇ ಕೇಳಿಕೊಳ್ಳುತ್ತವೆ. ಈ ಕವಿತೆಗಳನ್ನು, ಕವಿ ಮತ್ತು ಓದುಗರ ನಡುವಿನ ಸಂವಾದದಂತೆಯೂ ಓದಬಹುದು ಎಂದಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 60 ಕವನಗಳಿವೆ

About the Author

ಎಚ್‌.ಆರ್‌. ರಮೇಶ

ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ.  ...

READ MORE

Related Books