ಧ್ಯಾನಕ್ಕೆ ತಾರೀಖಿನ ಹಂಗಿಲ್ಲ

Author : ಕಾವ್ಯಾ ಕಡಮೆ ನಾಗರಕಟ್ಟೆ

Pages 72

₹ 70.00
Year of Publication: 2013
Published by: ಅಹರ್ನಿಶಿ ಪ್ರಕಾಶನ
Address: ಅಹರ್ನಿಶಿ ಪ್ರಕಾಶನ, ಅಂಚೆ ಕಚೇರಿ ರಸ್ತೆ, ಕೋಟೆ, ಶಿವಮೊಗ್ಗ - 577202
Phone: 9449174662

Synopsys

2013 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ `ಧ್ಯಾನಕೆ ತಾರೀಖಿನ ಹಂಗಿಲ್ಲ’ ಕೃತಿಯು 2012 ರ ಟೊಟೊ ಪುರಸ್ಕಾರದ ಹಸ್ತಪ್ರತಿ ಪ್ರಶಸ್ತಿಯನ್ನೂ ಪಡೆದಿತ್ತು. ಈ ಸಂಕಲನದಲ್ಲಿ 34 ಕವನಗಳಿವೆ. ವಿವರಗಳನ್ನು ಹೊಂದಿಸಿ ಹೆಣೆಯುವ ಕ್ರಮದಲ್ಲಿಯೇ ಕವನವೊಂದು ಅನುಭವದ ಅನಿರೀಕ್ಷಿತ ಮಜಲುಗಳನ್ನು ತೆರೆಯುತ್ತಾ ಕಟ್ಟುತ್ತಾ ಹೋಗುವ ಇಲ್ಲಿಯ ಕವನಗಳಲ್ಲಿ 'ಶೋಧ' ವೇ ಮೂಲಸ್ಥಾಯಿಯಾಗಿರುವಂತೆ ಕಾಣುತ್ತದೆ. ಸಾಮಾನ್ಯವಾಗಿ ಮೊದಲ ಪ್ರಯತ್ನದಲ್ಲಿ ಕಾಣಿಸುವ ಎಲ್ಲವನ್ನೂ ಹಿಡಿದುಬಿಡುವ ಆತುರ , ಹಿಡಿದುಬಿಟ್ಟೆನೆನ್ನುವ ಭ್ರಮೆ , ತೀರ್ಮಾನದ ದುಡುಕು, ಇಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಲೇಖಕ ವಿವೇಕ್ ಶಾನಭಾಗ್‌ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

About the Author

ಕಾವ್ಯಾ ಕಡಮೆ ನಾಗರಕಟ್ಟೆ

ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. 1988ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಮಾಕೋನ ಏಕಾಂತ’, ‘ತೊಟ್ಟು ಕ್ರಾಂತಿ’ ಕಥಾ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ’ ಮತ್ತು ‘ಡೋರ್ ನಂಬರ್ ಎಂಟು’ ಹಾಗೂ ‘ಸಂಜೀವಿನಿ ಸ್ಟೋರ್ಸ್’ ನಾಟಕ ಸಂಕಲನಗಳು. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ.  ಇವರ ಪದ್ಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ...

READ MORE

Awards & Recognitions

Related Books