ಲೇಖಕಿ ಸ್ಮಿತಾ ಅಮೃತರಾಜ್ ಅವರ ಕವನ ಸಂಕಲನ-ಮಾತು ಮೀಟಿ ಹೋಗುವ ಹೊತ್ತು. ಇಲ್ಲೆಯ ಬಹುತೇಕ ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭೂಮಿ ತೂಗುವ ಹಕ್ಕಿ, ಅರಳು ಗುಲಾಬಿಯ ಹಿಂದೆ, ಸೋನೆ ಹನಿ ಹನಿದ ಹೊತ್ತು, ಹಣತೆ ಹಾಡುತ್ತಿದೆ, ಮಳೆ ಬರುವ ಕಾಲಕ್ಕೆ. ಹೀಗೆ ಒಟ್ಟು 25 ಕವನಗಳಿವೆ. ಹಿರಿಯ ಕವಿ ಬಿ. ಆರ್. ಲಕ್ಷಣರಾವ್ ಮುನ್ನುಡಿ ಬರೆದು ‘ ತಮ್ಮ ಅನುಭವಕ್ಕೆ ದಕ್ಕಿದ ಪ್ರತಿಯೊಂದನ್ನು ಅರ್ಥಪೂರ್ಣ ರೂಪಕವಾಗಿಸುವ ಕಲೆ ಸ್ಮಿತಾ ಅವರಿಗೆ ದಕ್ಕಿದೆʼ ಎಂದು ಪ್ರಂಶಸಿದ್ದಾರೆ.
ಸ್ಮಿತಾ ಅಮೃತರಾಜ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ ಜೂನಿಯರ್ ಕಾಲೇಜು,ಮಡಿಕೇರಿ ಪಿ.ಯು.ಸಿ-ಸಂತ ಪಿಲೋಮಿನ ಕಾಲೇಜು.ಪುತ್ತೂರು ಹಾಗೂ ಪದವಿ ಶಿಕ್ಷಣವನ್ನು ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ - ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. ಕೃತಿಗಳು 'ಕಾಲ ಕಾಯುವುದಿಲ್ಲ 'ಅಂಗಳದಂಚಿನ ಕನವರಿಕೆಗಳು' ‘ಒಂದು ವಿಳಾಸದ ಹಿಂದೆ’. ಇವರಿಗೆ ಕೊಡಗಿನ ಗೌರಮ್ಮ ಪ್ರಶಸ್ತಿ, ಸುಳ್ಯದ ಚಂದನ ಪ್ರಶಸ್ತಿ ಬಿ.ಎಂ.ಶ್ರೀ ಸಾಹಿತ್ಯ ಪ್ರಶಸ್ತಿ, ದಾರಿ ದೀಪ ಪ್ರಶಸ್ತಿ. ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿಗಳು ಲಭಿಸಿವೆ. ...
READ MORE