ಕಾಯುತ್ತಾ ಕವಿತೆ

Author : ಅನಿತಾ ಪಿ. ತಾಕೊಡೆ

Pages 148

₹ 125.00
Year of Publication: 2013
Published by: ಅಭಿಜಿತ್ ಪ್ರಕಾಶನ
Address: ಎ/404, ವಿನಾಯಕ್ ಆಶೀಶ್, ಎಂ.ಎಂ.ಎಂ. ರೋಡ್, ಮುಂಬೈ- 400080

Synopsys

‘ಕಾಯುತ್ತಾ ಕವಿತೆ’ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೊಡೆ ಅವರ ಕವನ ಸಂಕಲನ. ಕಾಡುವ ಪ್ರೀತಿ, ಪ್ರಕೃತಿ, ಬದುಕು, ಕನಸು, ಗಂಡು-ಹೆಣ್ಣೊಲವು, ನೆನಪುಗಳು, ಸಾಂದರ್ಭಿಕ ಪ್ರಕರಣಗಳೇ ಕವಿತೆಗಳ ಕೇಂದ್ರ ಬಿಂದುಗಳಾಗಿವೆ. ಅಲ್ಲಲ್ಲಿ ಒಡಮೂಡುವ ವಿಷಾದ, ನೋವುಗಳನ್ನು ಬದಿಗೆ ಸರಿಸಿ ಬದುಕಿನ ಪ್ರೀತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಕವಿಯನ್ನು ಕಾಡಬಹುದಾದ ಅನೇಕ ವಿಷಯಗಳು ಅವರ ಪರಿಸರದಲ್ಲಿವೆ. ಅವನ್ನು ಸಮರ್ಥವಾಗಿ ಕಾವ್ಯ ಮುಖೇನ ದುಡಿಸಿಕೊಳ್ಳುವ ಅವಕಾಶಗಳೂ ಅವರ ಮುಂದಿವೆ. ಇಲ್ಲಿಯ ಕವಿತೆಗಳಲ್ಲಿ ವಾಚ್ಯತೆ, ಭಾವತೀವ್ರತೆ ತುಸು ಹೆಚ್ಚೇ ಇದ್ದರೂ ಕಾವ್ಯಲೋಕದಲ್ಲಿ ಭರವಸೆಯನ್ನು ಮೂಡಿಸುವ ಕವಿತೆಗಳನ್ನು ಕಾಣಬಹುದಾಗಿದೆ.

About the Author

ಅನಿತಾ ಪಿ. ತಾಕೊಡೆ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್‌ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ...

READ MORE

Related Books