ದಲಿತ-ಬಂಡಾಯ ಹೋರಾಟದ ಹಾಡುಗಳು

Author : ಎಚ್.ಎಸ್. ಬೇನಾಳ

Pages 198

₹ 150.00




Year of Publication: 2016
Published by: ಸಹನಾ ಪ್ರಕಾಶನ
Address: #408, ಸಿಐಬಿ ಕಾಲೋನಿ, ಕೇಂದ್ರ ಬಸ್ ನಿಲ್ದಾಣ ಹಿಂಭಾಗ, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರಗಿ-585103
Phone: 9901177823

Synopsys

ದಲಿತ-ಬಂಡಾಯ ಮೂಲ ಆಶಯದ ವಿವಿಧ ಲೇಖಕರ -ಕವಿಗಳ ಹಾಡುಗಳನ್ನುಎಚ್.ಎಸ್. ಬೇನಾಳ ಅವರ ಸಂಪಾದನಾ ಕೃತಿ-’ದಲಿತ-ಬಂಡಾಯ ಹೋರಾಟದ ಹಾಡುಗಳು’. ಭಾಗ-1 ರಲ್ಲಿ 66 ಹಾಡುಗಳಿದ್ದರೆ, ತೆಲುಗು ಮೂಲದ ಕನ್ನಡ ಅನುವಾದಿತ 15 ಹಾಡುಗಳನ್ನು ಭಾಗ-2 ರಲ್ಲಿ ಕಾಣಬಹುದು. ಸೋಲಾಪುರದಲ್ಲಿ ಡಾ. ಅಂಬೇಡ್ಕರರ ಭಾಷಣದ ಪ್ರಭಾವದೊಂದಿಗೆ ಪ್ರೇರೇಪಿತರಾಗಿ ’ಪಂಚಶೀಲ ಗವಾಯಿಗಳೆಂದೇ ಖ್ಯಾತಿಯ ಕಾಶೀನಾಥ ಗವಾಯಿಗಳ ಹಾಡುಗಳೂ ಇಲ್ಲಿ ಸಂಪಾದಿಸಲಾಗಿದೆ. ದಲಿತ-ಬಂಡಾಯ ಚಳವಳಿಗೆ ಸಾಂಸ್ಕೃತಿಕವಾಗಿ ಭದ್ರ ಬುನಾದಿ ಹಾಕಿದ ಈ ಹಾಡುಗಳ ಸಂಪಾದನೆಯು ಕೃತಿಯ ಮೌಲ್ಯ ಹೆಚ್ಚಿಸಿದೆ.

About the Author

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...

READ MORE

Related Books