ಬೆಂಡು ಬತಾಸು

Author : ಕೃಷ್ಣ ರಾಯಚೂರು

Pages 108

₹ 100.00
Year of Publication: 2017
Published by: ದಾಮಿನಿ ಸಾಹಿತ್ಯ
Address: ವಿಜಯನಗರ ಬೆಂಗಳೂರು-560040
Phone: 9845770196

Synopsys

ವ್ಯಕ್ತಿಚಿತ್ರಣಗಳ ಅಕ್ಕರಗಳಿಂದ ಮೂಡಿರುವ ಕೃಷ್ಣ ರಾಯಚೂರು ಅವರ ‘ಬೆಂಡು ಬತಾಸು’ ಕೃತಿಯು ಮಾನವೀಯ ಸಂಬಂಧವನ್ನೂ ಅತ್ಯಂತ ಗೌರವ ಭಾವದಿಂದ ಕಾಣುತ್ತದೆ. ಇಲ್ಲಿನ ಹಲವು ಬರಹಗಳು ಒಡನಾಟಕ್ಕೆ ಸಂಬಂಧಿಸಿದವುಗಳು. ರಂಗಕರ್ಮಿ ಸಿಜಿಕೆ ನೆನೆಯುತ್ತ ಬರೆದ ಸಾಲುಗಳಂತೂ ಮಾನವೀಯ ವಿಚಾರಗಳಿಂದ ಕೂಡಿದೆ. ಕಿರಂ, ಎಂ.ಎಸ್. ಮೂರ್ತಿ, ಅಮರೇಶ ನುಗಡೋಣಿ, ಕೆವೈಎನ್, ಜಂಬಣ್ಣ ಅಮರಚಿಂತ, ಅಡಪ, ಕಾ.ತ. ಚಿಕ್ಕಣ್ಣ, ಅವರಂಥ ದಿಗ್ಗಜರಿಂದ ಹಿಡಿದು ಓವೆನ್, ಸಂಸ ಸುರೇಶ, ಶೆಟ್ಟಿ, ಚಂಪಾ, ವೇಣುಗೋಪಾಲ ಅವರಂಥ ಅತ್ಯಂತ ಕ್ರಿಯಾಶೀಲ ಮನಸುಗಳ ಬಗ್ಗೆಯೂ ಆಪ್ತವಾದ ಮಾತುಗಳು ಇಲ್ಲಿವೆ. ರಾಷ್ಟ್ರೀಯ ಕಲ್ಪನೆ, ಮೊದಲ ಪ್ರದರ್ಶನ, ಮುನ್ನೂರು ರೂಪಾಯಿ, ಕಾವ್ಯಭೂಮಿ ಹರಟೆ-ಪ್ರಸಂಗಗಳ ಆಚೆ, ನಾನು ಮತ್ತು ಗಾಂಧಿಬಂದ, ಕಾತ ಚಿಕ್ಕಣ್ಣ, ಓವೆನ್-ಬಣ್ಣ-ಕವಿತೆ, ಮದುಮಗಗಳ ಯಾನ, ಕಲಾಧ್ಯಾನ್ ಎಂಬ ಹುಚ್ಚು, ಸಿಹಿಗಾಳಿಯ ಚುಂಬಕ, ಸರ್ವಋತುಗಳು ಸೇರಿದಂತೆ ಅನೇಕ ಲೇಖನಗಳು ಇಲ್ಲಿ ಸೇರಿಕೊಂಡಿವೆ. ಪ್ರೀತಿ- ಸಂಬಂಧಗಳು ಸಾಂಸ್ಕೃತಿಕ ವಲಯದ ಒಳನೋಟಗಳು ಆಪ್ತವಾಗಿ ಮೂಡಿಬಂದಿವೆ. ಗದ್ಯದ ಮೂಲಕ ಹೇಳ ಹೊರಟಿರುವ ಶೈಲಿ ಕಾವ್ಯತ್ಮಾಕ ಪ್ರವೇಶದೊಂದಿಗೆ ಭಾಷೆಯ ಹಿಡಿತ, ಸಂವೇದನಾಭರಿತ ವಿಷಯಗಳು ಓದುಗರ ಮನಕಲಕುವುದರಲ್ಲಿ ಯಾವುದೇ ಸಂದೇಹಗಳಿಲ್ಲ ಎನ್ನಬಹುದು.

About the Author

ಕೃಷ್ಣ ರಾಯಚೂರು

ಲೇಖಕ ಕೃಷ್ಣ ರಾಯಚೂರು ಕವಿ, ಕಲಾವಿದ. 1964ರಲ್ಲಿ ಜನನ. ಕನ್ನಡ, ಹಿಂದಿ, ಫ್ರೆಂಚ್ ಚಲನಚಿತ್ರಗಳಿಗೆ ಸಹ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅವರು ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವ ವೇದಿಕೆಗಳ ವಿನ್ಯಾಸ, ದೇವ್ ನಾಗೇಶ್ ನಂದನ ರಂಗತಂಡ ರೂಪಿಸಿದ 100 ಗಂಟೆಗಳ ನಿರಂತರ ನಾಟಕದ ರಂಗವಿನ್ಯಾಸಕ್ಕಾಗಿ ಲಿಮ್ಕಾ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಕೃತಿಗಳು: ವಿನ್ಯಾಸದ ಹೊರಗೆ, ಜೋಳಿಗೆಯಲ್ಲೊಂದು ಅಗುಳು(ಕವನ ಸಂಕಲನ), ಬೆಂಡು ಬತಾಸು ...

READ MORE

Related Books