ಬೆಳ್ಳಿ ಹೂವು

Author : ಲತಾ ಗುತ್ತಿ

Pages 156

₹ 60.00




Year of Publication: 2000
Published by: ಸುಭೋದ ಪ್ರಕಾಶನ
Address: ಜರಗನಹಳ್ಳಿ ಬೆಂಗಳೂರು-560078
Phone: 2978150

Synopsys

ಲತಾ ಗುತ್ತಿಯವರು ಬರೆದ ’ಬೆಳ್ಳಿ ಹೂವು’ ಕವನ ಸಂಕಲನವು ನಿಸರ್ಗ,  ಸೂರ್ಯ, ಚಂದ್ರ, ಮೋಡ, ಮಳೆ, ಆಕಾಶ, ಗಿಡ, ಹೂವು.... ಎಲ್ಲವೂ ಇವರ ನೋಟದ ಬೀಸು ಕಬಳಿಸುತ್ತದೆ. ಆದರೂ ಇದಾವುದೂ ಕೇವಲ ನಿಸರ್ಗದ ಚಿತ್ರವಾಗಿ ಬಂದಿರದೆ, ಮನುಷ್ಯ ವ್ಯವಹಾರದ ವಿದ್ಯಮಾನಗಳಿಗೆ ’ವೈರುಧ್ಯ’ದ ಮಾನದಂಡಗಳಾಗಿ ಬಂದಿರುವುದು ಈ ಕವಿತೆಯಲ್ಲಿನ ವಿಶೇಷತೆ. ಇಲ್ಲಿ ಕವಿ ಎಲ್ಲೋ ಒಂದು ಕಡೆ ಕುಳಿತ ಧ್ಯಾನಸ್ಥನಾಗದೆ ಅವನೊಬ್ಬ ನಿರಂತರ ಪಯಣಿಸುವ ಪಯಣಿಗನಾಗಿ. ಪಯಣದ ಅವಸರ, ಆವೇಗ, ತರಾತುರಿ, ರೋಮಾಂಚನ, ಕುತೂಹಲ ಎಲ್ಲವೂ ಪಯಣಿಗನ ಕಿರು ಅನುಭವಗಳಲ್ಲಿ ಕಟ್ಟಿಕೊಂಡು ಕಿರು ಅಭಿವ್ಯಕ್ತಿಗಳಲ್ಲಿ ವ್ಯಕ್ತ ಪಡಿಸುವುದಾಗಿದೆ. ಪ್ರೇಮ, ವಿರಹ, ಉನ್ಮಾದ, ದಾಂಪತ್ಯ ಸಂವಾದ ಹೀಗೆ ಹಲವಾರು ಮುಖಗಳನ್ನು ಈ ಕವನ ಸಂಕಲನದಲ್ಲಿ ಮಂಡಿಸಿದ್ದಾರೆ. ಜೊತೆಗೆ ಕೆಲ ಗಂಭೀರ ವಸ್ತುಗಳನ್ನು ಅವರು ಲೀಲಾಜಾಲವಾಗಿ ಚರ್ಚಿಸಿದ್ದಾರೆ. ವಿಶೇಷ ಗಮನ ಸೆಳೆಯುವ ಕವನಗಳೆಂದರೆ ’ಬುರ್ಕಾ’ದ ಸುತ್ತ ಬರೆದವು ಎರಡು ಸಂಸ್ಕೃತಿಗಳ ವೈರುಧ್ಯಗಳನ್ನು ಸ್ಫುಟವಾಗಿ ಸೆರೆ ಹಿಡಿದಿರುವ ಚಿತ್ರಗಳಿವು. ಹಾಗೆಯೇ ’ಗಾಂಧಿ’ ಸುತ್ತ ಬರೆದ ಕವನಗಳು ಕೂಡ. ಸ್ವಾತಂತ್ರ್ಯೋತ್ತರದ ವರ್ಷಗಳಲ್ಲಿ ಗಾಂಧಿ ವಿವೇಕದ, ಮೌಲ್ಯದ ಒಂದು ಸಂಕೇತವಾಗಿಟ್ಟುಕೊಂಡು ಕವಿತೆ ಬರೆದಿದ್ದಾರೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books