ಅಲೆಮಾರಿಯ ಹಾಡು

Author : ರಮೇಶ ಗಬ್ಬೂರ

Pages 60

₹ 60.00
Year of Publication: 2012
Published by: ಪಿಟೀಲು ಪ್ರಕಾಶನ
Address: ಗಬ್ಬೂರು, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ.
Phone: 9844433128

Synopsys

ಸಾಮಾಜಿಕ ಪ್ರಜ್ಞೆ, ಹೈದರಾಬಾದ್‌ ಕರ್ನಾಟಕದ ಜನಸಮುದಾಯಗಳ ತಲ್ಲಣಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿಗೊಳಿಸಿರುವ ಕವಿತೆಗಳ ಸಂಕಲನ ‘ಅಲೆಮಾರಿಯ ಹಾಡು’. ‘ಸಮಕಾಲೀನ ಬದುಕಿನ ಬಗ್ಗೆ ಎಚ್ಚರದ ಸ್ಥಿತಿಯಿಂದ ಪ್ರತಿಕ್ರಿಯಿಸುವ ಕವಿ ರಮೇಶ ಗಬ್ಬೂರ ಅವರ ಕಾವ್ಯದ ಧಾಟಿ ವಿಶಿಷ್ಟ. ಅಂತರಂಗದ ವಿಷಾದ, ಸಾಮಾಜಿಕ ತಲ್ಲಣಗಳ ಹಿನ್ನೆಲೆಯಲ್ಲಿ ಅಭಿವ್ಯಕ್ತಗೊಂಡಿರುವುದು ಈ ಸಂಕಲನದ ವೈಶಿಷ್ಟ್ಯ. ಕವಿತೆಯ ಆಶಯದ ಪರಿಧಿ ವಿಸ್ತಾರಗೊಂಡಾಗ ಸಾರ್ವತ್ರಿಕತೆ ಸಹಜವಾಗಿ ದಕ್ಕುತ್ತದೆ’ ಎನ್ನುತ್ತಾರೆ ಸಾಹಿತಿ ಗುಂಡೂರು ಪವನ್‌ ಕುಮಾರ್‌.

ಅಲೆಮಾರಿಯ ಹಾಡು ಕವನ ಸಂಕಲನದ ಒಂದು ಕವಿತೆ ನಿಮ್ಮ ಓದಿಗಾಗಿ ‘ನೊಂದು ನೋಯುವವಗೆ ಶೋಷಿತರಿಗೆ ಮಿಡಿವವಗೆ ಎದೆ ಏರಿಸಿ ಹಾಡುವವಗೆ ನನ್ನವರ ನೆನೆಯುವವಗೆ ನನ್ನ ಕವಿತೆ’ 

About the Author

ರಮೇಶ ಗಬ್ಬೂರ
(05 June 1968)

ಹಾಡುಗಾರ, ಕವಿ ರಮೇಶ ಗಬ್ಬೂರ ಅವರು ಜನಿಸಿದ್ದು 1968 ಜೂನ್‌ 5ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಗಬ್ಬೂರ. ಪ್ರಸ್ತುತ ಗಂಗಾವತಿಯ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಚಳವಳಿಯಲ್ಲಿಯೂ ಸಕ್ರಿಯರಾಗಿರುವ ಇವರು ಜಾಗೃತ ಗೀತೆ ರಚನೆ ಹಾಗೂ ಹಾಡುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಗೂನು ಬೆನ್ನಿನ ಗದ್ದೆ, ಅಲೆಮಾರಿಯ ಹಾಡು, ಗರೀಬ್‌ ಗಜ಼ಲ್‌, ಸಂಜೀವಪ್ಪ ಗಬ್ಬೂರ, ಒಲಿದಂತೆ ಹಾಡುವೆ, ಗಬ್ಬೂರ್‌ ಗಜ಼ಲ್‌ ಹಾಗೂ ಕಾಮ್ರೆಡ್‌ ಬಸವಣ್ಣ ಇವರ ಪ್ರಮುಖ ಕೃತಿಗಳು.   ...

READ MORE

Related Books