ಮೊಳಕೆಯೊಡೆಯದ ಬೀಜ

Author : ವಸು ಮಳಲಿ

Pages 128

₹ 90.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಇತಿಹಾಸದ ಪ್ರಾಧ್ಯಾಪಕರಾಗಿದ್ದ ವಸು ಮಳಲಿ ಅವರದು ಸೃಜನಶೀಲ ಹಾಗೂ ತಾತ್ವಿಕ ಜಿಜ್ಞೆಗಳೆರಡನ್ನೂ ಹದವಾಗಿ ಬೆಸೆದುಕೊಂಡಿದ್ದ ಮನಸು. ಚಿಂತಕಿಯಾಗಿ ಗುರುತಿಸಲಾಗುತ್ತಿದ್ದ ವಸು ಮಳಲಿ ಅವರು ಇತಿಹಾಸದ ಬರವಣಿಗೆಯ ಲೇಖಕಿ ಎಂದು ಪರಿಗಣಿಸಲಾಗುತ್ತಿತ್ತು. ಪ್ರಮುಖ ಪತ್ರಿಕೆಯಲ್ಲಿ ಸಮಕಾಲೀನ ಸಂಗತಿಗಳ ಕುರಿತು ಬರೆದ ಅಂಕಣಗಳು ಅವರ ಚಿಂತನಕ್ರಮ- ಬರವಣಿಗೆಗೆ ಖಚಿತತೆಗೆ ಸಾಕ್ಷಿಯಾಗಿದ್ದವು. ವಸು ಮಳಲಿಯವರ ಅಕಾಲಿಕ ನಿಧನದ ನಂತರ ಪ್ರಕಟವಾದ ಕವಿತೆಗಳ ಸಂಕಲನವಿದು. ಸಂಕಲನದ ಕವಿತೆಗಳ ಬಗ್ಗೆ ಡಾ. ಎಚ್.ಎಸ್. ಅನುಪಮಾ ಅವರು ‘ಕವಿ ಮಾನವ ಪರ ಆಗಿದ್ದರಷ್ಟೇ ಸಾಲದು, ಜೀವಪರವೂ ಆಗಿರಬೇಕು. ಬುದ್ಧನ ಜೀವ ಕಾರುಣ್ಯವೆಂದರೆ ಅದು. ಈ ನೆಲ ಮನುಷ್ಯರಿಗೆಷ್ಟೋ ಅಷ್ಟೇ ಇಲ್ಲಿನ ಸಕಲ ಜೀವರಾಶಿಗಳಿಗೂ ಸೇರಿದೆ. ಆದರೆ ಎಷ್ಟೋ ಜೀವಿಗಳು ಈ ಭೂಮಿ ಮೇಲಿಂದ ಶಾಶ್ವತವಾಗಿ ಮರೆಯಾಗಿವೆ. ಎಂದೇ ಪ್ರಾಣಿ, ಪಕ್ಷಿ, ನೆಲ, ಜಲ, ಗಾಳಿಯ ಉಳಿವಿನ ಪ್ರಶ್ನೆ ಮನುಷ್ಯನನ್ನೂ ಉಳಿಸುವಂಥದೇ ಆಗಿದ್ದು ಜೀವಪರವಾಗಿರಬೇಕಾದ ಅವಶ್ಯಕತೆ ಕವಿತೆಗಿದೆ.ಈ ಜೀವ ಕಾರುಣ್ಯದ ಅರಿವಿನಲ್ಲಿ ವಸು ಅವರು ಬರೆದ ಕೆಲ ಕವಿತೆಗಳಿವೆ. ಅವರ ಒಂದು ಕವಿತೆಯಲ್ಲಿ ಮಿಡತೆಯು ಗೋಸುಂಬೆಗೆ, ‘ಮಾನವ ಬಣ್ಣವಿಲ್ಲದವ/ನಿಂತಲ್ಲಿ ಕೂತಲ್ಲಿ ಬಣ್ಣ ಬಳಿಯುತ್ತಾನೆ/ ಜೋಪಾನ ಗೋಸುಂಬೆ!/ ಅವನ ಬಳಿ ಸುಳಿಯದಿರು/ ನಿನ್ನ ಬಣ್ಣವಿರಲಿ/ನಿನ್ನನ್ನೇ ಬದಲಿಸುತ್ತಾನೆ’ ಎಂದು ಎಚ್ಚರಿಕೆ ಕೊಡುತ್ತದೆ. ಮನುಷ್ಯರ ಕೇಡಿಗತನದ ಬಗೆಗೆ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಪ್ರಾಣಿ ಜಗವನ್ನು ಎಚ್ಚರಿಸಿರುವ ಸಾಲುಗಳಿವು. ಬಹುಶಃ ಈ ಅಭಿಪ್ರಾಯವಿದ್ದುದರಿಂದಲೇ ‘ಕರಗಿ ಹೋದೇನು’ ಎಂಬ ಅರ್ಥಗರ್ಭಿತ ಕವಿತೆ ಬರೆಯಲು ಸಾಧ್ಯವಾಗಿದೆ. ‘ಅಶೋಕ ಶಾಸನ ಬರೆದೆಯಾದರೆ/ ನನ್ನ ಬೆನ್ನು ಬಂಡೆಯಾಗಲಿ’ ಎನ್ನುತ್ತ, ‘ಸಾಧಕನ ಕೈಯ ಸಾಧನವಾಗಿ/ ನಾನೆಲ್ಲವೂ ಆಗಿ/ ನಾನಿಲ್ಲವಾಗಿ ಕರಗಿ ಹೋದೇನು’ ಎನ್ನುತ್ತಾರೆ. ವಿಶ್ವಾತ್ಮಕವಾಗ ಹೊರಟ ಲೋಕ ಸಂಸಾರಿ ಜೀವಗಳ ಅಭಿಲಾಷೆ ಇದಕ್ಕಿಂತ ಇನ್ನೇನಾಗಿರಲು ಸಾಧ್ಯವಿದೆ?

About the Author

ವಸು ಮಳಲಿ
(07 February 1967)

ಲೇಖಕಿ, ಕವಯಿತ್ರಿ, ಅಂಕಣಕಾರ್ತಿ, ಚಿತ್ರ ನಿರ್ದೇಶಕಿ, ಇತಿಹಾಸ ತಜ್ಞೆ ಹಾಗೂ ಸಂಸ್ಕೃತಿ ಚಿಂತಕಿ ಡಾ.ಎಂ.ವಿ. ವಸು ಆವರು ’ವಸು ಮಳಲಿ’ ಎಂದೇ ಚಿರಪರಿಚಿತರು. ಹಿರಿಯ ಸಾಹಿತಿ ಮಳಲಿ ವಸಂತಕುಮಾರ್ ಅವರ ಪುತ್ರಿ.  1967ರ ಫೆಬ್ರವರಿ 7ರಂದು ಜನಿಸಿದರು. ಖ್ಯಾತ ಫೋಟೋಗ್ರಾಫರ್ ರನ್ನ ಎಂ.ವಿ. ಇವರ ಸಹೋದರ. ವಸು ಮಳಲಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದಿದ್ದ ಅವರು ವಿಶ್ವವಿದ್ಯಾಲಯ ಖೋಖೋ ತಂಡದ ನಾಯಕಿಯೂ ಆಗಿದ್ದರು. ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಅವರು 1998ರಲ್ಲಿ ಬೆಂಗಳೂರು ...

READ MORE

Related Books