ಕಾಡುಮಲ್ಲಿಗೆ

Author : ಸುರೇಶ ವಾಂಕ್ಡೋತ್

Pages 88

₹ 100.00
Year of Publication: 2021
Published by: ಗಮ್ಯ ಪ್ರಕಾಶನ
Address: # 20/56, ಕೊಂಡಜ್ಜಿ ರಸ್ತೆ, ಅಶೋಕ ನಗರ, ದಾವಣಗೆರೆ

Synopsys

ಕವಿ ಸುರೇಂದ್ರ ವಾಂಕ್ಡೋತ್ ಅವರ ಕವನ ಸಂಕಲನ-ಕಾಡುಮಲ್ಲಿಗೆ. ಒಟ್ಟು 45 ಕವನಗಳಿವೆ. ಲೇಖಕ ಸುರೇಂದ್ರ ಅವರು ತಮ್ಮ ಮಾತುಗಳಲ್ಲಿ ‘ಕಾಡುಮಲ್ಲಿಗೆ ನನ್ನ ಕನಸಿನ ಕೂಸು. ಪ್ರಸವಾನಂತರದ ಖುಷಿಯೊಂದೇ ಸಾಕು ನನ್ನ ಪಾಲಿಗೆ’ ಎಂದು ತಮ್ಮ ಕವಿತೆಗಳ ಕುರಿತು ಹೇಳಿಕೊಂಡಿದ್ದಾರೆ. ಪತ್ರಕರ್ತ ದೇವು ಪತ್ತಾರ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ತಮ್ಮ ಮೊದಲ ಪ್ರಯತ್ನದಲ್ಲಿ ಸುರೇಂದ್ರ ಅವರು ಕವಿತೆಯ ಮೋಹಕತೆಗೆ ಒಳಗಾಗಿ ಅವಳ ಜೊತೆ ಒಡನಾಡಿ ಅದರ ಅನುಭವವನ್ನು ಅಕ್ಕರದಿ ದಾಖಲಿಸಿದ್ದಾರೆ. ಕವಿತೆಗೆ ಭಾವ -ಅಕ್ಕರತೆ ಮಾತ್ರ ಸಾಕಾಗುವುದಿಲ್ಲ. ಅವಳು ಬಯಸುವ ತಾದಾತ್ಮತೆ-ಏಕಾಗ್ರತೆ ನೀಡಿರುವ ಮುಂಬರುವ ದಿನಗಳಲ್ಲಿ ಇದ್ದುದ್ದಕ್ಕಿಂತ ಉತ್ತಮವಾದ ಕವಿತೆಗಳನ್ನು ಸುರೇಂದ್ರ ಬರೆಯಬಲ್ಲರು. ಕವಿತೆ ಎಂದರೆ ಇರುವುದು ಅಲ್ಲ; ಆಗುವುದು. ‘ಆಗುವ’ ಪ್ರಕ್ರಿಯೆಯ ಕವಿತೆಗಳು ‘ಕಾಡು ಮಲ್ಲಿಗೆ’ಯಲ್ಲಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಸುರೇಶ ವಾಂಕ್ಡೋತ್

ಕವಿ ಸುರೇಶ ವಾಂಕ್ಡೋತ್ ಅವರು ದಾವಣಗೆರೆಯಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿಗಳು. `ಕಾಡುಮಲ್ಲಿಗೆ' ಇವರ ಕವನ ಸಂಕಲನ. ...

READ MORE

Related Books