ಅಪ್ರಮೇಯ

Author : ಕೆ.ವಿ. ತಿರುಮಲೇಶ್‌

Pages 264

₹ 270.00
Year of Publication: 2023
Published by: ಅಭಿನವ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

‘ಅಪ್ರಮೇಯ’ ತಿರುಮಲೇಶ್‌ ಕೆ.ವಿ ಅವರ ಕವನಸಂಕಲನವಾಗಿದೆ. ಚರಿತ್ರೆ ಬರೆಯಲು ಕೇಳಬೇಡಿ ನನ್ನನ್ನು, ಚರಿತ್ರೆ ಬರೆಯಲು ಹೊರಟಿಲ್ಲ ನಾನು. ನಾನು ಸೋತವರ ಪಾರ್ಟಿ ಸೋತವರು ಚರಿತ್ರೆನ ಬರೆಯುವುದಿಲ್ಲ ಸೋತವರು ಬರೆಯುವುದು ಕವಿತೆ. ಆದ್ದರಿಂದಲೆ ಈ ನಾನೂ ಇದ್ದೇನೆ ಅವರ ಜತೆ ಅದೂ ಎಪಿಕ್ ಕಾವ್ಯವೇನಲ್ಲ ಇಂದಿನ ದಿನ ಹೀರೋ ಇಲ್ಲ ಹಿರೋಯಿನ್ ಇಲ್ಲ ಅರಮನೆ ಗಿರಮನೆ ಯಾವುದೂ ಇಲ್ಲ ಕತೆಯಿಲ್ಲ ಕಾಂಚಣವಿಲ್ಲ ಕಾರಣವಿಲ್ಲ ಕೋಟೆ ಕೊತ್ತಳ ಬುರುಜು ಗುಂಬಜುಗಳಿಲ್ಲ ಕೆಲವು ಅವಶೇಷಗಳಿವೆ ಮುರಿದ ಕೊಳವೆಗಳು ಲೈಟ್ ಕಂಬಗಳು ಧ್ವಜಸ್ತಂಭಗಳು ಒಡೆದ ಗಾಜುಗಳು ಅಂಗಾಂಗ ತುಂಡಾದ ಪ್ರತಿಮೆಗಳು ಅವುಗಳ ಕುರಿತಾಗಿಯೇ ಬರೆಯುತ್ತೇನೆ ಎನ್ನುತ್ತಾರೆ ಕವಿ. ಇಲ್ಲಿನ ಕವಿತೆಗಳು ಸರಳ ಭಾಷೆಯಲ್ಲಿ ನೋವು ನಲಿವುಗಳಿಗೆ ಧ್ವನಿಯಾದಂತಿವೆ. 

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books