ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ

Author : ರಂಗನಾಥ ಕಂಟನಕುಂಟೆ

Pages 162

₹ 200.00
Year of Publication: 2023
Published by: ಚಿಂತನ ಚಿತ್ತಾರ
Address: ಮಳಿಗೆ ಸಂಖ್ಯೆ 2, ಮುಡಾ ಕಾಂಪ್ಲೇಕ್ಸ್\nಐ ಬ್ಲಾಕ್,ರಾಮಕೃಷ್ಣ ನಗರ,ಆಂದೋಲನ ಸರ್ಕಲ್ ಹತ್ತಿರ, ಮೈಸೂರು 570022
Phone: 9945668082

Synopsys

`ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ’ ಕೃತಿಯು ರಂಗನಾಥ ಕಂಟನಕುಂಟೆ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಇಲ್ಲಿನ ಕೆಲವು ಕವಿತೆಗಳು ಹೊಸತು, ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೆಚ್ಚಿನ ಕವಿತೆಗಳು ಪೇಸ್ಟುಕ್‌ನಲ್ಲಿ ಪ್ರಕಟಗೊಂಡು ಹಲವರು ಓದಿ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿಯೂ ಇಲ್ಲಿನ 'ಪ್ರೇಮಬಿಕ್ಕು' ಕವಿತೆಯನ್ನು ಫೇಸ್ಟುಕ್‌ನಲ್ಲಿ ಪ್ರಕಟಿಸಿದ ದಿನ ನೂರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು. ನಂತರ ಅದನ್ನು ಸುಮಾ ಎಂಬಾರ್ ಅವರು ಇಂಗ್ಲಿಶ್‌ ಅನುವಾದಿಸಿದರು. ಇನ್ನು ಅನೇಕ ಕವಿತೆಗಳು ಫೇಸ್ಟುಕ್‌ನಲ್ಲಿ ಪ್ರಕಟವಾಗಿದ್ದು ಅವನ್ನು ಅನೇಕರು ಓದಿ ಮೆಚ್ಚಿದ್ದಾರೆ. ಪ್ರತಿಕ್ರಿಯಿಸಿದ್ದಾರೆ. ಇನ್ನು ಕವಿತೆಯೊಳಗೆ ತೀವ್ರವಾದ ಒಳನೋಟವಿದ್ದು, ಓದುಗರಿಗೆ ಸಂಕೀರ್ಣ ನೇಯ್ಗೆಯಂತೆ ದಕ್ಕಲಿವೆ. ಒಳ ಹೊರ ಅನುಭಗಳ ಗುಚ್ಛವಾಗಿ ಈ ಕೃತಿಯು ಹೊರಬಂದಿದ್ದು, ವಾಸ್ತವ ಜಗತ್ತಿನಿಂದಲೇ ಹೆಕ್ಕಿ ಹೆಣೆದ ಇಲ್ಲಿಯ ಬಹುದೊಡ್ಡ ಸಂಕಟಮಯ ವಿದ್ಯಮಾನ ಎಲ್ಲರನ್ನು ತಲ್ಲಣಗೊಳಿಸುತ್ತದೆ.

About the Author

ರಂಗನಾಥ ಕಂಟನಕುಂಟೆ

ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...

READ MORE

Related Books