ಇನಿದನಿ

Author : ಪ್ರಸನ್ನಾ ವಿ. ಚೆಕ್ಕೆಮನೆ

Pages 40

₹ 20.00




Year of Publication: 2014
Published by: ಕರ್ನಾಟಕ ಸರ್ಕಾರ
Address: ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

Synopsys

ಕವಿ, ಲೇಖಕಿ ಪ್ರಸನ್ನ ವಿ ಚೆಕ್ಕೆಮನೆ ಅವರ ಚೊಚ್ಚಲ ಕವನ ಸಂಕಲನ ‘ಇನಿದನಿ’. ಈ ಕವನಸಂಕಲನಕ್ಕೆ ಪತ್ರಕರ್ತ ಪ್ರಕಾಶ್ ಇಳಂತಿಲ ಅವರು ಮುನ್ನುಡಿ ಬರೆದಿದ್ದಾರೆ. ‘ಕಾವ್ಯ ಜನರ ಬದುಕಿನ ಚೈತನ್ಯ ಚಿಲುಮೆ. ಕವಿಯ ಸೃಜನಶೀಲ ಮನದಲಿ ಹುಟ್ಟಿ ಕಾವ್ಯವಾಗಿ ಹರಿದು ಓದುಗರ ಮನತಟ್ಟಿ ಮಿಡಿಯುವಂತೆ ಮಾಡಲು ಕವನಕ್ಕೆ ಪ್ರಾಣ ತುಂಬಿದಂತೆ. ನೀತಿ ಭಾವ ರಸದಿಂದ ಕವನ ಝೇಂಕರಿಸಿದರೆ ಓದುಗನ ಮನಹೊಕ್ಕಿ ಜೀವರಸಕೊಂಡು ಶಕ್ತಿಯಾಗುತ್ತದೆ. ಕಾವ್ಯಕೆ ಒಲಿಯದ ಮನವಿಲ್ಲ, ಕಾವ್ಕೆ ಸೋಲದ ಜನರಿಲ್ಲ, ಕಾವ್ಯ ಮನದ ಒರಟನು ತಿದ್ದಿ ನಯಗೊಳಿಸುವ ಪರಿ ಅನನ್ಯ. ಲೇಖಕಿ ಪ್ರಸನ್ನಾ ಚಕ್ಕೆಮನೆಯವರ ಚೊಚ್ಚಲ ಕವನ ಸಂಕಲನ ಇದಾಗಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಒಂದು ಉತ್ತಮ ಯೋಜನೆಯಡಿ ಇವರ ಕವನ ಸಮಖಲನ ಹೊರಬರುತ್ತಿದೆ. ಪ್ರಸನ್ನಾ ಅವರ ಸೃಜನಶೀಲ ಚಿಂತನೆಗೆ ಈ ಕೃತಿ ಇನ್ನಷ್ಟು ಪುಷ್ಟಿ ಕೊಡಲಿ’ ಎಂಬುದಾಗಿ ಪ್ರಕಾಶ್ ಇಳಂತಿಲ ಹೇಳಿದ್ದಾರೆ.

About the Author

ಪ್ರಸನ್ನಾ ವಿ. ಚೆಕ್ಕೆಮನೆ
(05 January 1979)

ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...

READ MORE

Related Books