ನದಿಗೊಂದು ಕನಸು ಮತ್ತು ಅವಳು

Author : ಸತ್ಯಾನಂದ ಪಾತ್ರೋಟ

Pages 136

₹ 50.00




Year of Publication: 2004
Published by: ಸಮತಾ ಪ್ರಕಾಶನ
Address: ಬಾಗಲಕೋಟೆ, ವಿಜಾಪುರ ಜಿಲ್ಲೆ 587101
Phone: 9845012151

Synopsys

ಕವಿ ಸತ್ಯಾನಂದ ಪಾತ್ರೋಟ ಅವರ ಕವನ ಸಂಕಲನ ‘ನದಿಗೊಂದು ಕನಸು ಮತ್ತು ಅವಳು’. ‘ಕನಸಿನ ಪ್ರಸಂಗ, ಎದೆಯ ಮಾತು, ನಿನ್ನಂತ ಪ್ರೀತಿಯೆ, ನೀನೆಂದು ಬರುವಿ, ಕವಿತೆಯ ಬೇರು, ನಗೆಯ ಹೂ, ಜೀವನದಿ, ಬಿರಿದ ಮೊಗ್ಗೆ, ಆ ಮರ - ಈ ನೆರಳು, ಹೇಗೆ ಮರೆಯಲಿ ಹೇಳು, ಕವಿಯೊಳಗೊಬ್ಬ ಕವಿ, ಚೆಲುವೆ ಮತ್ತು ಕವಿ, ಮಾತಾಡು ಗಿಳಿಯೆ, ಇವಳು, ಬದುಕಲೇ ಬೇಕೀಗ, ಬೆಳಕಾದ ಹಬ್ಬ, ಬುದ್ಧನಂತೆ ಒಂದಿಷ್ಟು ನಾನು, ನಿನ್ನ ಆಗಮನ, ಮುಟ್ಟಿದವರ ಮೈಮನಕೆ’ ಮುಂತಾದ ಕವಿತೆಗಳನ್ನು ಈ ಕವನ ಸಂಕಲನ ಒಳಗೊಂಡಿದೆ.

About the Author

ಸತ್ಯಾನಂದ ಪಾತ್ರೋಟ

ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು. ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ...

READ MORE

Related Books