ನಾನೂ ದೀಪ ಹಚ್ಚಬೇಕೆಂದಿದ್ದೆ

Author : ಅಕ್ಷತಾ ಕೃಷ್ಣಮೂರ್ತಿ

Pages 120

₹ 110.00
Year of Publication: 2020
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯರಸ್ತೆ, ಬಿಎಸ್ ಕೆ ಮೂರನೇ ಹಂತ, ಬೆಂಗಳೂರು- 560085
Phone: 7204945245

Synopsys

‘ನಾನೂ ದೀಪ ಹಚ್ಚಬೇಕೆಂದಿದ್ದೆ’ ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಅವರ ಕವಿತೆಗಳ ಸಂಕಲನ. ಈ ಕೃತಿಗೆ 2020ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ದೊರೆತಿದೆ. ಕವಿ ಎಚ್. ಎಲ್. ಪುಷ್ಪ ಅವರು  ಕೃತಿಗೆ ಬೆನ್ನುಡಿ ಬರೆದು ‘ ಇಲ್ಲಿನ ಕವಿತೆಗಳು ವಿಶೇಷ ಎನಿಸುವುದು ಏಕಕಾಲದಲ್ಲಿ ಅವು ಒಳಗೊಳ್ಳುವ ಸ್ವಕೇಂದ್ರ ಹಾಗೂ ತನಗೆ ಅಂಟಿಕೊಂಡ ಅವನೆಂಬ ಸಾಂಗತ್ಯದ ಕೇಂದ್ರಗಳಿಂದಾಗಿ’ ಎನ್ನುತ್ತಾರೆ. 

ಬೇಂದ್ರೆಯವರು ಹೇಳುವಂತಹ ಸಖ್ಯದ ಆಖ್ಯಾನವಿದು. ಸಖ್ಯದ ಆಖ್ಯಾನಗಳು ಲೀಲೆಯಾಗಿ, ಆಟವಾಗಿ ಹಲವು ಕವಿತೆಗಳಲ್ಲಿ ಮುಂದುವರೆಯುತ್ತವೆ. ಈ ಒಲವಾಗಿ ನಲಿವಾಗಿ, ಕಾಡುವಿಕೆ, ಅರ್ಪಣೆಯ ಭಾವದಲ್ಲಿ ಬಂಧನಕ್ಕೆ ಒಳಗಾಗುವ ತವಕದಲ್ಲಿಯೇ ಸಾರ್ಥಕತೆ ಕಂಡುಕೊಂಡಿದೆ. ಮುಳುಗಡೆ ಮತ್ತು ಅಣೆಕಟ್ಟು ಒಡೆಯುವಿಕೆ ಇವರ ಕವಿತೆಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತವೆ. ಚಲನೆಯೇ ಮೂಲವಾದ ಜಲ ಇಲ್ಲಿ ಖೈದಿಯಾಗುವುದು ಒಂದು ರೀತಿಯ ಹೊಸ ಪ್ರತಿಮೆಯಾಗಿದೆ. ಈ ಚಲನೆಯನ್ನು ಹಿಡಿದಿಡುವ ಜಡತೆಯನ್ನು ಅಣೆಕಟ್ಟಿನಲ್ಲಿ ಬಂಧಿಯಾಗಿ ಪ್ರಶ್ನಿಸುವುದನ್ನು ಏಕಕಾಲಕ್ಕೆ ಕವಿತೆ ಹಿಡಿದಿಡುತ್ತದೆ.

About the Author

ಅಕ್ಷತಾ ಕೃಷ್ಣಮೂರ್ತಿ
(02 November 1981)

ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ...

READ MORE

Related Books