ಮೌನವು ಸತ್ತಾಗ

Author : ಟಿ.ಕರಿಷ್ಮಾ

Pages 88

₹ 100.00
Year of Publication: 2021
Published by: ಐಸಿರಿ ಪ್ರಕಾಶನ
Address: ನಾಗರಬಾವಿ ಬೆಂಗಳೂರು-72
Phone: 934180447001

Synopsys

’ಮೌನವು ಸತ್ತಾಗ’ ಕೃತಿಯು ಟಿ. ಕರೀಷ್ಮ ಅವರ ಕವನಸಂಕಲನ. ಮಾತು ಮತ್ತು ಮೌನಗಳ ಸಂಬಂಧದ ಬಗ್ಗೆ ಬಹುಕಾಲದಿಂದಲೂ ಚರ್ಚೆಗಳು ನಡೆದಿವೆ ಎನ್ನುತ್ತಾರೆ ಕವಿ. ಕೃತಿಗೆ ಮುನ್ನುಡಿ ಬರೆದಿರುವ ಮಾನಕರಿ ಶ್ರೀನಿವಾಸಚಾರ್ಯ `ಮಾತನಾಡಬಯಸಿದರೂ ಸಾಧ್ಯವಾಗದ ಮೌನವು ಅಸಹನೀಯ ವೇದನೆಯಾಗುತ್ತದೆ. ಸಂಕೋಚ, ಭಯ, ಹಿಂದೆ ಅನುಭವಿಸಿದ ನೋವು, ಅಪಮಾನ, ಆಡಿದ ಮಾತನ್ನು ಸರಿಯಾಗಿ ಗ್ರಹಿಸಿ ಪ್ರತಿಕ್ರಿಯೆ ನೀಡುವವರ ಕೊರತೆ, ಎಂದೋ ,  ಆಡಿದ ಮಾತೇ ಮೃತ್ಯುವಾದ ಕಹಿ ಅನುಭವ, ಆಡಿದರೂ ಪ್ರಯೋಜನವಿಲ್ಲ ಬಿಡು’ ಎಂಬ ಹತಾಶೆ, ’ ತುಟಿ ಬಿಚ್ಚಿದರೆ ಸಂಬಂಧಗಳು ಕೆಟ್ಟಾವು’ ಎಂಬ ಆತಂಕ ವಾತಾವರಣವನ್ನು ನಿರ್ಮಿಸಿದ ಸಮಾಜ ಮುಂತಾದ ಹತ್ತು ಹಲವು ಕಾರಣಗಳಿಂದಾಗಿ ಮೌನವೇ ಉತ್ತಮ ಎನಿಸಿ, ಒಲ್ಲದ ಮೌನದ ಶಿಕ್ಷೆಯನ್ನು ಅನುಭವಿಸುವವರ ಸಂಖ್ಯೆಯೇ ಹೆಚ್ಚು. ಕವನಗಳು ಚಿಂತನಶೀಲವಾಗಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಟಿ.ಕರಿಷ್ಮಾ

ಲೇಖಕಿ ಟಿ.ಕರಿಷ್ಮಾ ಮೂಲತಃ ಬಳ್ಳಾರಿಯವರು. ಲೇಖಕಿ ಬಿ.ಎ, ಬಿಎಡ್ ಪದವೀಧರರು. ಬಳ್ಳಾರಿಯ ಮೂರನೇ ಅಪರ ಸಿವಿಲ್ ಮತ್ತು ಜೆ ಎಂ ಎಫ್ ಸಿ ಕೋರ್ಟ್‌ನಲ್ಲಿ ಪ್ರಥಮ ದರ್ಜೆ ಸಹಾಯಕರು. ಕೃತಿಗಳು: ಮೌನವು ಸತ್ತಾಗ ...

READ MORE

Related Books