ಹುಣಸೆ ಹೂ

Author : ಹರವು ಸ್ಫೂರ್ತಿಗೌಡ

Pages 96

₹ 100.00




Year of Publication: 2014
Published by: ಸ್ಫೂರ್ತಿ ಪ್ರಕಾಶನ
Address: ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ
Phone: 9481675573

Synopsys

ಹುಣಸೆ ಹೂ- ಯುವ ಕವಯತ್ರಿ ಹರವು ಸ್ಫೂರ್ತಿಗೌಡ ಅವರ ಮೊದಲ ಕವನ ಸಂಕಲನ. ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರಿಂದ ಚೊಚ್ಚಲ ಕೃತಿಗೆ ಪ್ರೊತ್ಸಾಹ ಧನ ಪಡೆದ ಕೃತಿ ಇದು. ಸ್ಫೂರ್ತಿ ಬದುಕನ್ನು ತುಂಬಾ ಪ್ರೀತಿಸುತ್ತಾರೆ. ತಾರುಣ್ಯದ ಈ ಹೊತ್ತಿನ ಹಲವು ಅನುಭವಗಳನ್ನೂ ತನ್ನೊಳಗೇ ಒರೆಹಚ್ಚಿ ನೋಡುತ್ತಿದ್ದಾರೆ. ಅದಿಲ್ಲವಾದರೆ ಆಕೆ `ನಾವು ಮಾರಾಟಕ್ಕಿಲ್ಲ' ಕವನ ಬರೆಯುತ್ತಿರಲಿಲ್ಲ. `ಮತ್ತೆ ನಿನ್ನನ್ನೇ ಪ್ರೀತಿಸುತ್ತಿದ್ದೇನೆ ಹಳೇ ಕಡಲೇ' ಕವನ ಆಕೆಯಿಂದ ಹೊರ ಬರುತ್ತಿರಲಿಲ್ಲ ಎನ್ನುತ್ತಾರೆ ಪತ್ರಕರ್ತೆ ಹಾಗೂ ಲೇಖಕಿ ವಿದ್ಯಾರಶ್ಮಿ.  

ತಾಜಾ ಭಾವ, ಸಹಜ ಅಭಿವ್ಯಕ್ತಿ, ಕೃತಕತೆಯಿಲ್ಲದ ರೂಪಕಗಳು ಇದು ಸ್ಫೂರ್ತಿ ಅವರ ವೈಶಿಷ್ಟ್ಯ. ತಮ್ಮ ವಯಸ್ಸಿನ ಏರು, ಉದ್ವೇಗ, ಒಳಗುದಿಯೆಲ್ಲವನ್ನೂ ಇಲ್ಲಿ ಹೊರಹಾಕಿದ್ದಾರೆ. ಅಲ್ಲಿ ಮುಖವಾಡವಿಲ್ಲ, ಮುಖಸ್ತುತಿಯೂ ಇಲ್ಲ. ಬಿಟ್ಟ ಬಾಣದಂತೆ ನೇರ, ಸುಲಲಿತ. ಅದಕ್ಕೇ ಅವು ನಮ್ಮ ಹೃದಯಕ್ಕೇ ನಾಟುತ್ತವೆ, ಅಲ್ಲೇ ಕೂರುತ್ತವೆ. ಸ್ಫೂರ್ತಿಯ ಬೆಳವಣಿಗೆಯ ಹಾದಿಯೂ ಇದೇ ಆಗಿದೆ. 

About the Author

ಹರವು ಸ್ಫೂರ್ತಿಗೌಡ
(16 April 1989)

ಕವಿ, ಪತ್ರಕರ್ತೆ ಹರವು ಸ್ಫೂರ್ತಿಗೌಡ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ. ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ, ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಬ್ಬು’, ‘ಕೋಳಿ ಅಂಕ’ ಸಾಕ್ಷಿಚಿತ್ರ ನಿರ್ದೇಶನ. ಕನ್ನಡ ಪುಸ್ತಕ ಪ್ರಾದಿಕಾರದಿಂದ ‘ಹುಣಸೆ ಹೂ’ ಮೊದಲ ಕವನ ಸಂಕಲನ ಪ್ರಕಟಣೆ, ‘ಋಣ’ ಅವರ ಎರಡನೆ ಕವನ ಸಂಕಲನ, ಸೂಲಂಗಿ ಕಾದಂಬರಿ ಅಚ್ಚಿನಲ್ಲಿದೆ. ಜನಶ್ರೀ, ಪ್ರಜಾಟಿವಿ, ಬಿಗ್ ಬಾಸ್, ಸೂಪರ್ ಮಿನಿಟ್, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಣೆ. ಸದ್ಯ ಪ್ರಜಾವಾಣಿಯಲ್ಲಿ ಉಪ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

READ MORE

Related Books