ಚಿತ್ರದ ಬೆನ್ನು

Author : ಎನ್ಕೆ ಹನುಮಂತಯ್ಯ

₹ 60.00




Published by: ಕನ್ನಡ ಸಾಹಿತ್ಯ ಪರಿಷತ್ತು
Address: ಬೆಂಗಳೂರು- 560018

Synopsys

ಲೇಖಕ ಎನ್‌.ಕೆ. ಹನುಮಂತಯ್ಯ ಅವರ ಕವನ ಸಂಕಲನ ಕೃತಿ ʼಚಿತ್ರದ ಬೆನ್ನುʼ. ಇಲ್ಲಿರುವ ಕವನಗಳ ಮುಖ್ಯ ಕಥಾವಸ್ತುವು ʻಆಗಿದೆʼ. ಸಾವಿನ ಬಗೆಗಿನ ತುಡಿತಗಳ ಬಗ್ಗೆ ಕಥಾನಾಯಕ ಮತ್ತೆ ಮತ್ತೆ ಒತ್ತಿ ಹೇಳುತ್ತಾನೆ. 'ಸತ್ತವರು ಬದುಕಿರುವವರನ್ನು ಪ್ರೀತಿಸಲು ಒಂದು ಸಣ್ಣ ಕಾರಣ ಸಾಕು, ನಾವಿನ್ನು ಸಾವಿನ ಕಾರಣಗಳಿಂದ ದೂರವಾಗಬೇಕು' ಎಂದು ಒಂದೆಡೆ ಹೇಳಿದರೆ, ಅದಕ್ಕೇ ತಾಯಿ ನಿನಗಿಂತಲೂ ಮೊದಲು ನಾನು ಸಾಯುತ್ತಿರುವೆ. ಮರೆತಾದರೂ ನನ್ನ ಹೆಣದ ಮೇಲೆ ಈ ಮಣ್ಣ ಮುಚ್ಚದಿರು' ಎಂದು ಮತ್ತೊಂದೆಡೆ ಹೇಳುವನು.

About the Author

ಎನ್ಕೆ ಹನುಮಂತಯ್ಯ

ತಿಪಟೂರು ತಾಲ್ಲೂಕಿನ ನಾಗರಘಟ್ಟದಲ್ಲಿ ಜನಿಸಿದ್ದ (1974) ಎನ್.ಕೆ. ಹನುಮಂತಯ್ಯ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ದ ಎನ್ಕೆ ಕಿರಿಯ ವಯಸ್ಸಿನಲ್ಲಿಯೇ (2010) ತೀರಿಹೋದರು. ಹಿಮದ ಹೆಜ್ಜೆ (ಕವನ ಸಂಕಲನ- 2001), ಚಿತ್ರದ ಬೆನ್ನು (ಕವನ ಸಂಕಲನ-  2006), ಎಂ.ವಿ. ವಾಸುದೇವರಾವ್ (ವ್ಯಕ್ತಿಚಿತ್ರ- 2000), ಕ್ರಾಂತಿ ವಸಂತ (ಬಿ.ಬಸವಲಿಂಗಪ್ಪನವರ ವ್ಯಕ್ತಿಚಿತ್ರ), ಜಲಸ್ತಂಭ (ನಾಟಕ- 2005) ಪುಸ್ತಕಗಳನ್ನು ಪ್ರಕಟಿಸಿದ್ದರು. ಊರು ಕೇರಿ ಪತ್ರಿಕೆಯ ಸಂಪಾದಕರು ಆಗಿದ್ದರು. ...

READ MORE

Related Books