ಕನ್‌ಫ್ಯೂಷಿಯಸ್‌ ಸೂಕ್ತಿ-ಸಂಗ್ರಹ

Author : ಡಿ.ಎನ್‌. ಶ್ರೀನಾಥ್‌

Pages 142

₹ 120.00




Year of Publication: 2018
Published by: ವಂಶಿ ಪಬ್ಲಿಕೇಷನ್ಸ್‌
Address: ನೆಲಮಂಗಲ, ಬೆಂಗಳೂರು
Phone: 9916595916

Synopsys

ಕನ್‍ಫ್ಯೂಷಿಯಸ್‍ನ ಹೆಸರು ‘ಚುಂಗ್ ನೀ’ ಎಂದಾಗಿತ್ತು. ಅವರು ಹುಟ್ಟಿದ್ದು ಲೂ ಡ್ಯುಕ್ ಆಯೆಯವರ ಕಾಲದ 551 ಕ್ರಿ.ಪೂ.ದಲ್ಲಿ, ‘ಲೂ’ ರಾಜ್ಯದ ‘ತ್ಸಓ’ ಎಂಬಲ್ಲಿ (ಇಂದಿನ ಶಾನ್ ತುಂಗ್ ಪ್ರಾಂತದ ಛಯು ಫೂ ಎಂಬ ಸ್ಥಳ) ಎಂದು ಹೇಳಲಾಗುತ್ತದೆ. 479 ಕ್ರಿ.ಪೂ.ದಲ್ಲಿ, ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.

ಕನ್‍ಫ್ಯೂಷಿಯಸ್ ಮತ್ತು ಶಿಷ್ಯರ ನಡುವೆ ವಿಭಿನ್ನ ವಿಷಯಗಳ ಬಗ್ಗೆ ನಡೆದ ಸಂಭಾಷಣೆಗಳ ವರ್ಣನೆ ಈ ಕೃತಿಯಲ್ಲಿದೆ. ಶಿಕ್ಷಣ, ಪರಿವಾರ ಮತ್ತು ಸಮಾಜದಲ್ಲಿ ಅವರ ನೈತಿಕ ಮಾದರಿ ಮತ್ತು ಅವರು ಶೈಕ್ಷಣಿಕ ಮಾನದಂಡಗಳನ್ನು ರೂಪಿಸಿದ್ದದು ಗಮನ ಸೆಳೆಯುತ್ತದೆ. ಕನ್‍ಫ್ಯೂಷಿಯಸ್‍ರ ಸಿದ್ಧಾಂತಗಳು ಕ್ರಮೇಣ ಚೀನಾ ಆಳುವ ವರ್ಗದ ಕನ್ನಡಿಯಾದವು; ಇದು 2500 ವರ್ಷಗಳವರೆಗೆ ಅನೇಕ ರಾಜವಂಶಗಳು ವಿಶೇ ಷವಾಗಿ ಹಾನ್, ಥಾಂಗ್, ಸುಂಗ್, ಮಿಂಗ್ ಮತ್ತು ಛಿಂಗ್‍ರ ನಡುವೆ ಅತ್ಯಂತ ಪರಿಣಾಮಕಾರಿಯಾಗಿತ್ತು.

ಅಂದಿನ ರಾಜ್ಯದ ಪರೀಕ್ಷೆಗಳಲ್ಲಿಯೂ ಕನ್‍ಫ್ಯೂಷಿಯಸ್‍ರಿಂದ ಸಂಕಲನಗೊಂಡ ಗ್ರಂಥಗಳನ್ನು ಅಳವಡಿಸಿಕೊಳ್ಳಲಾಯಿತು. ಕನ್‍ಫ್ಯೂಷಿಯಸ್ ಅವರು ಅಭಿಜಾತ ವರ್ಗದಲ್ಲಿ ಜನಿಸಿದ್ದರು; ಅವರು ಶಿಕ್ಷಕರಾಗುವುದಕ್ಕೂ ಮೊದಲು ದನ ಕಾಯುವವರು, ಗುಮಾಸ್ತರು ಮತ್ತು ಗ್ರಂಥಗಳ ರಕ್ಷಣೆಯ ಕೆಲಸವನ್ನು ಮಾಡಿದ್ದರು ಎಂದು ಹೇಳಲಾಗುತ್ತದೆ. ಕನ್‍ಫ್ಯೂಷಿಯಸ್ ಕಾಲದಲ್ಲಿ ಗುಲಾಮಗಿರಿಯ ಸಮಾಜ ಪತನಗೊಳ್ಳುತ್ತಿದ್ದರೆ, ಊಳಿಗಮಾನ್ಯ ವ್ಯವಸ್ಥೆ ಉದಯ ವಾಗುತ್ತಿತ್ತು. ಕನ್‍ಫ್ಯೂಷಿಯಸ್ ಸೂಕ್ತಿ-ಸಂಗ್ರಹದಲ್ಲಿ ಈ ಬಗ್ಗೆ ಸುಳಿವುಗಳಿವೆ.

 

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books