ಊರ ಹನುಮಪ್ಪನಿಗೊಂದೆರಡು ಪ್ರಶ್ನೆ

Author : ಬಸವರಾಜ ಎಸ್. ಕಲೆಗಾರ

Pages 120

₹ 100.00
Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಅಂಚೆ: ಡೊಂಗರಗಾoವ್, ತಾಲೂಕು ಕಮಲಾಪುರ, ಜಿಲ್ಲೆ ಕಬಲುರಗಿ
Phone: 97411 69055

Synopsys

ಲೇಖಕ ಹಾಗೂ ಸಾಹಿತಿ ಡಾ. ಬಸವರಾಜ ಎಸ್. ಕಲೆಗಾರ ಅವರ ಕವನ ಸಂಕಲನ-ಊರ ಹನುಮಪ್ಪನಿಗೊಂದೆರಡು ಪ್ರಶ್ನೆ. ಈ ಕವನ ಸಂಕಲನದ ಹೆಸರಿನಲ್ಲಿಯೇ ಕವಿಯ ಒಟ್ಟು ಧೋರಣೆ ಮತ್ತು ಚಿಂತನೆಗಳು ಧ್ವನಿಸಿವೆ. ಇದರಲ್ಲಿ 30 ಕವಿತೆಗಳು ಹಾಗೂ ಹನಿಗವನಗಳು ಮತ್ತು ಆಧುನಿಕ ವಚನಗಳು ಸೇರಿಕೊಂಡಿವೆ. ಅಲ್ಲಲ್ಲಿ , ರೇಖಾಚಿತ್ರಗಳನ್ನು ನೀಡಿದ್ದು ಕೃತಿಯ ತೂಕ ಹೆಚ್ಚಿಸಿದೆ. ಶ್ರೇಣಿಕೃತ ಸಮಾಜದಲ್ಲಿನ ಜಾತಿ ತಾರತಮ್ಯದ ಪ್ರತಿನಿಧಿಯಾಗಿ ಧ್ವನಿಯೆತ್ತಿದ ಕಲೆಗಾರರ ಕವಿತೆಗಳಿಗೆ ನೇರಾನೇರ ನೋಟಗಳಿವೆ, ತಮ್ಮ ಬದುಕಿನಲ್ಲಿ ಎದುರಾದ ಸಮಸ್ಯೆಗಳು, ಸವಾಲುಗಳು,ಅನುಭವಿಸಿದ ಯಾತನೆಗಳು,ಘಟನೆಗಳು, ಸಾಮಾಜಿಕ ನಿಲುವು ಇಲ್ಲಿಯ ಕವಿತಗಳಿಗೆ ಇವೆ. ಬುದ್ಧ ಬಸವ ಅಂಬೇಡ್ಕರ್ ಅವರ ಪ್ರಭಾವ ಕವಿತೆಗಳಲ್ಲಿ ಕಾಣಬಹುದಾಗಿದೆ. ಜಿಡ್ಡುಗಟ್ಟಿದ ಸಂಪ್ರದಾಯಗಳ ನಿರಾಕರಣೆ ವೈಚಾರಿಕ ಚಿಂತನೆಯ ಬೆಳಕಿನ ಎಳೆ ಗಳು ಬಹುತೇಕ ಕವಿತೆಗಳಲ್ಲಿ ಕಂಡುಕೊಳ್ಳಬಹುದು. ಈ ಕವಿಗೆ ಸಮಾನತೆಯ ಹಸಿವು ಮತ್ತು ಜಾತೀಯತೆ ಗಾಡವಾಗಿ ಕಾಣಿಸುವ ಸಂಗತಿಗಳು. ಇವರು ಕಟ್ಟುವ ಚಿತ್ರಗಳು ಮನಸ್ಸು ಸಂಬಂಧಗಳನ್ನು ಸ್ಪಷ್ಟ ಸಮಾಜ ನಿರ್ಮಾಣದ ಕವಿತೆಗಳಾಗಿವೆ. ಹತಾಶೆ ವಿಷಾದ ಕನಿಕರ ತುಂಬಿದ ಕವಿತೆಗಳು ಇಲ್ಲಿವೆ. ಎದೆಯೊಳಗಿನ ನೋವೇ ಕವಿತೆಗಳಾಗಿ ಓದುಗರಿಗೆ ಉಣಬಡಿಸುತ್ತವೆ.

About the Author

ಬಸವರಾಜ ಎಸ್. ಕಲೆಗಾರ
(06 July 1984)

ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...

READ MORE

Related Books