ಅನುವಿನು

Author : ಜೀವರಾಜ ಹ ಛತ್ರದ

Pages 96

₹ 110.00
Year of Publication: 2019
Published by: ಖುಷಿ ಪಬ್ಲಿಕೇಷನ್ಸ್
Address: #117, ಶ್ರಾವಣಿ ಪ್ಯಾಲೇಸ್, ಹಿರೇಹಳ್ಳಿ ಪೋಸ್ಟ್, ತುಮಕೂರು ತಾಲ್ಲೂಕು, ಜಿಲ್ಲೆ- 572168
Phone: 9844203877

Synopsys

ಲೇಖಕ ಜೀವರಾಜ ಹ ಛತ್ರದ ಅವರ ’ಅನುವಿನು’ ಕವನ ಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಲಿಂಗಾರೆಡ್ಡಿ ಶೇರಿ ಅವರು, ಜೀವರಾಜ ಛತ್ರ ಅವರ ’ಅನುವಿನು’ ಎಂಬ ಕವನ ಸಂಕಲನದ 73 ಕವನಗಳನ್ನು ಓದುವಾಗ ನೆನಪಾದ ಮಾತುಗಳು ಮಾನವೀಯ ಪ್ರೇರಣೆ, ಮತ್ತು ಮಧ್ಯಮವರ್ಗದ ಭಾವುಕತೆ. ಈ ಸಂಕಲನದ ಸಾಲುಗಳಲ್ಲಿ ಕಾಣಸಿಗುತ್ತವೆ. ಗ್ರಾಮೀಣ ಪರಿಸರದ ಅವರ ಜೀವಾನುಭಾವ ಕವಿತೆಗಳಲ್ಲಿ ವಿಶಿಷ್ಟ ಭಾಷೆ ಮತ್ತು ಶೈಲಿಯ ಮೂಲಕ ಮೂರ್ತಿರೂಪ ತಾಳಿ ನಿಲ್ಲುತ್ತವೆ. ಮಧ್ಯಮವರ್ಗದ ಭಾವುಕತೆ, ಕಾವ್ಯದ ವಸ್ತು ಮತ್ತು ಆ ವರ್ಗದ ಭವಿಷ್ಯ ಎರಡರ ಒಂದು ತತ್ವ ಹತ್ತಿರದ ಸಂಬಂಧವಿರುವುದರಿಂದ , ಆ ವರ್ಗ ವಿಚಿತ್ರ ಬಗೆಯ ಭಯದ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಒಟ್ಟು ಕವನ ಸಂಕಲನದ ಕುರಿತು ಹೇಳುವುದಾದರೆ, ಕವಿಗೆ ಕಾವ್ಯದ ಅರಿವು ಸ್ಪಷ್ಟವಾಗಿ ಇದೆ. ಪದ್ಯದ ಲಯ, ಛಂದಸ್ಸಿನ ಬಂಧ, ಗೇಯತೆಯ ಗುಣದ ಕಸುವು, ಜನಪದ ಭಾಷೆಯ ಸೊಗಡು ಕಣ್ಣಿಗೆ ಕಟ್ಟುವಂತಿದೆ. ಪ್ರತಿ ಕವನ ಐದು ನುಡಿಗಳ ವಿಸ್ತಾರ ಹೊಂದಿದೆ. ಸಮಕಾಲೀನ ವಸ್ತು ವಿಷಯ ಕುರಿತು ಇರುವ ಇವರ ರಚನೆಗಳಲ್ಲಿ ಜೀವನ ಪ್ರೀತಿಯಿದೆ. ಹಾಡಿದಾಗ, ರೂಪಕವಾಗಿ ಪ್ರದರ್ಶಿಸಿದಾಗ ಇಲ್ಲಿನ ಕವಿತೆಗಳು ಪರಿಣಾಮಕಾರಿಯಾಗಿ ನಿಲ್ಲಬಲ್ಲವು’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...

READ MORE

Related Books