ಹೆಜ್ಜೆ ಗುರುತು (ಕವನ ಸಂಕಲನ)

Author : ವೇದಾಮಂಜುನಾಥನ್ ಬೆಳಗೆರೆ

Pages 93

₹ 100.00




Year of Publication: 2017
Published by: ಶಕ್ತಿ ಪ್ರಿಂಟರ್‍ಸ್ ಆಂಡ್ ಪಬ್ಲಿಷರ್‍ಸ್
Address: ಬೆಂಗಳೂರು

Synopsys

‘ಹೆಜ್ಜೆ ಗುರುತು’ ವೇದಾ ಮಂಜುನಾಥನ್ ಬೆಳಗೆರೆ ಅವರ ಕವನ ಸಂಕಲನವಾಗಿದೆ. ಇಲ್ಲಿ ಕವಿ ಕಣ್ಣಿಗೆ ಕಂಡ, ಮನಸ್ಸಿಗೆ ಹಿಡಿಸಿದ, ಮನವನ್ನು ಕಲಕಿದ, ಹೃದಯಕ್ಕೆ ನಾಟಿದ ವಿಷಯಗಳಿಗೆ, ಭಾವನೆಗಳಿಗೆ ಆಕಾರವನ್ನು ಕೊಟ್ಟು, ಕವನಗಳನ್ನು ರಚಿಸಿದ್ದಾರೆ. ಕವಿತೆ ಎಂಬುದು ಕವಿಯ ಮನಸ್ಸಿನ ದರ್ಪಣ. ಮನದ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನ.ಇಲ್ಲಿರುವಂತಹ ಅನೇಕ ಕವನಗಳು ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿವೆ. ವಿಭಿನ್ನ ರೀತಿಯ ವಸ್ತುಗಳನ್ನು ಒಳಗೊಂಡ ಕವನಗಳಿವೆ. ಅಮೃತಸಿಂಚನ, ಹೂ ಅರಳಿದಾಗ, ಅಪ್ಪನೆಂಬ ಅದ್ಭುತ, ಸಿಂಧೂರ, ಕಾಂಕ್ರೀಟ್ ಕಾಡಿನಲ್ಲಿ, ಅನ್ನದಾತ, ಮೂಕಪ್ರೇಕ್ಷಕ, ಮಸಣದ ಹೂವು, ಕರುನಾಡು, ಪುಟ್ಟನ ಕನಸು, ಮಳೆಸಂಜೆ, ಆಲಿಕಲ್ಲು, ಕಾಗದದ ದೋಣಿ ಮುಂತಾದ ಕವನಗಳು ಈ ಕೃತಿಯಲ್ಲಿವೆ. 

 

About the Author

ವೇದಾಮಂಜುನಾಥನ್ ಬೆಳಗೆರೆ

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ.  ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...

READ MORE

Related Books