ಯುಗಾದಿ

Author : ಚನ್ನಕೇಶವ ಜಿ ಲಾಳನಕಟ್ಟೆ

Pages 74

₹ 110.00




Year of Publication: 2022
Published by: ಗುರು ಪ್ರಕಾಶನ
Address: ಲಾಳನಕಟ್ಟೆ ಕೊಂಡಜ್ಜಿ ಪೋಸ್ಟ್‌, ತುರುವಕೆರೆ ತಾಲೂಕು, ತುಮಕೂರು
Phone: 9731111234

Synopsys

ಯುಗಾದಿ ಚೆನ್ನಕೇಶವ ಜಿ.ಲಾಳನ ಕಟ್ಟೆ ಅವರ ಕವನ ಸಂಕಲನವಾಗಿದೆ. ಈ ಸಂಕಲನದ ಮೊದಲ ಕವನ 'ಯುಗಾದಿ'ಯಿಂದ ಹಿಡಿದು ಎಪ್ಪತ್ತನೆಯ ಕವನ "ಯುಗಾಧಿ ಚೆಲುವು" ವರೆಗಿನ ಕವನದವರೆಗೂ ಇರುವ ಪ್ರತಿಯೊಂದು ಕವನವೂ ವೈವಿಧ್ಯತೆಯಿಂದ ಕೂಡಿದ್ದು, ಅದರದ್ದೇ ಆದ ಸೊಬಗನ್ನು ಹೊಂದಿದೆ. ಲಯ ಬದ್ಧವಾದ ಕವನಗಳು ಅನುಭವಾಮೃತದಿಂದ ಮೂಡಿದ್ದು ರಂಜನೀಯವಾಗಿ ಸುಲಲಿತವಾಗಿವೆ. ಕವನಗಳಲ್ಲಿ ಕನ್ನಡ ಭಾಷೆಯ ಸೊಗಡಿದ್ದು, ಸುಲಿದ ಬಾಳೆಯ ಹೆಣ್ಣನ್ನು ಜೇನಿನಲ್ಲಿ ಅದ್ದಿದಂತಹ ಕವನಗಳು ಪದ ಲಾಲಿತ್ಯದಿಂದ ಮನಸೆಳೆಯುತ್ತವೆ. ಪ್ರಸ್ತುತ ದ್ವಿತೀಯ ಕವನ ಸಂಕಲನದಲ್ಲಿ ಮಾತೃಪ್ರೇಮದಿಂದ ಕೂಡಿದ 'ಜನ್ಮದಾತೆ", "ತಾಯಿ ದೇವರು", "ಹಡೆದ ತಾಯಿ", ಮಾತೃ ಭಾಷಾ ಪ್ರೇಮದ "ಕಸ್ತೂರಿ ನುಡಿ, ನಾಡು, ನುಡಿ, ನೆಲ, ಜಲ, ಪ್ರೀತಿ, ಪ್ರೇಮ, ಪ್ರಣಯ, ಶೃಂಗಾರ, ದೇಶಭಕ್ತಿ, ಪ್ರಕೃತಿ, ರೈತ, ಮುಂತಾದ ಪ್ರಕಾರದ ಮಾನವೀಯತೆಯಿಂದ ಕೂಡಿದ ಕವನಗಳ ಜೊತೆಯಲ್ಲಿ ಪಟ್ಟದಿಯಿಂದ ಕೂಡಿದ ಕವನಗಳನ್ನು ಒಳಗೊಂಡಿದೆ.

About the Author

ಚನ್ನಕೇಶವ ಜಿ ಲಾಳನಕಟ್ಟೆ

ಚನ್ನಕೇಶವ ಜಿ ಲಾಳನಕಟ್ಟೆ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಲಾಳನಕಟ್ಟೆಯವರು. ಈವರೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ್ದು ಅವುಗಳಲ್ಲಿ ಛಂದೋಬದ್ಧ ಮಾತ್ರಗಣ, ಅಂಶಗಣ ಅಕ್ಷರಗಣ ನವ್ಯ ನವೋದಯ ಸಾಹಿತ್ಯದ ಪ್ರಕಾರಗಳಾದ ಭಾವಗೀತೆಗಳು, ಷಟ್ಪದಿಗಳು, ರಗಳೆ, ಮುಕ್ತಕಗಳು, ತ್ರಿಪದಿಗಳು, ದ್ವಿಪದಿಗಳು, ಅಕ್ಕರಿಕೆ, ಸಾಂಗತ್ಯ, ಏಳೆ ಇತ್ಯಾದಿ ಕವಿತೆಗಳಿದ್ದು ಸುಮಾರು ೫೦ ಕ್ಕೂ ಹೆಚ್ಚು ಕವಿತೆಗಳು ಭಾವಗೀತೆಗಳಾಗಿ ವಿವಿಧ ಯುಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿರುತ್ತವೆ. ಮಡಿಲು ಕವನ ಸಂಕಲನವು ಬಿಡುಗಡೆಯಾಗಿದ್ದು, ಈಗಾಗಲೇ ರಾಜ್ಯಸರ್ಕಾರದ ಗ್ರಂಥಾಲಯಕ್ಕೆ ಆಯ್ಕೆಯಾಗಿದೆ. ಯುಗಾದಿ ಕವನ ಸಂಕಲನವು ಬಿಡುಗಡೆಗೆ ಸಿದ್ದವಿದೆ. ...

READ MORE

Related Books