ಲೇಖಕ ಗುರುಗಣೇಶ ಭಟ್ ಡಬ್ಗುಳಿ ಅವರ ಕವನ ಸಂಕಲನ ’ಇದುವರೆಗಿನ ಪ್ರಾಯ’. ಕೃತಿಗೆ ಮುನ್ನುಡಿ ಬರೆದ ನರೇಂದ್ರ ಪೈ , ’ಈ ಸಂಕಲನದ ಎಲ್ಲ ಕವಿತೆಗಳೂ ಚೆನ್ನಾಗಿವೆ. ಇಡೀ ಸಂಕಲನ ಜೀವಂತಿಕೆಯಿಂದಲೂ, ಹೊಸತನದಿಂದಲೂ ಮತ್ತು ಅದರ ಮುಗ್ಧತೆಯಿಂದಲೂ ನಳನಳಿಸುತ್ತಿವೆ. ಈ ಮುಗ್ಧತೆ ಎಂದರೆ ಮನುಷ್ಯನ ಮುಗ್ಧತೆಯಲ್ಲ, ಪ್ರಕೃತಿಯ ಮುಗ್ಧತೆ. ಹಾಗಾಗಿ, ಈ ಕವಿತೆಗಳು ಮಹತ್ವಾಕಾಂಕ್ಷೆಯ ರಚನೆಗಳೇನಲ್ಲ. ತನಗೆ ಖುಷಿ ಕೊಟ್ಟ ಪ್ರಕೃತಿಯ ಮಡಿಲಲ್ಲಿ ಸುಮ್ಮನೇ ಒಂದು ಹಕ್ಕಿ ಹಾಡಿದಂತೆ ಇವೆ ಇವು. ಅಷ್ಟು ಮುಗ್ಧ ಮತ್ತು ಅಷ್ಟು ಮಹತ್ವಾಕಾಂಕ್ಷೆಯಿಂದ ಮುಕ್ತ. ಹಾಗಾಗಿಯೇ ಸುಂದರ.’ ಎಂದು ಪ್ರಶಂಸಿದ್ದಾರೆ.
ಲೇಖಕ ಗುರುಗಣೇಶ ಭಟ್ ಡಬ್ಗುಳಿ ಅವರು ಮೂಲತಃ ಉತ್ತರ ಕನ್ನಡದ ಯಲ್ಲಾಪುರದವರು. ಪ್ರಸ್ತುತ ಡಿಜಿಟಲ್ ಮಾಧ್ಯಮದಲ್ಲಿ ಕೆಲಸ. ’ಇದುವರೆಗಿನ ಪ್ರಾಯ’ ಇವರ ಮೊದಲ ಕವಿತಾ ಸಂಕಲನ. ...
READ MORE