ಆರಾಧನೆ

Author : ಪಂಚಮಿ ಕುಮಾರಿ ಬಾಕಿಲಪದವು

Pages 22

₹ 20.00
Year of Publication: 2019
Published by: ಅಡ್ಯನಡ್ಕ ಎಜುಕೇಷನಲ್ ಸೊಸೈಟಿ
Address: ಅಡ್ಯನಡ್ಕ ಅಂಚೆ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ- 574260

Synopsys

'ಆರಾಧನೆ' ಪಂಚಮಿ ಕುಮಾರಿ ಬಾಕಿಲಪದವು ಅವರ ಮೊದಲ ಕವನ ಸಂಕಲನ. ಕವಿ ಮನಸ್ಸು ಹೆಚ್ಚು ಸೂಕ್ಷ್ಮಗ್ರಾಹಿಯಾದುದು. ಸುತ್ತಲ ಜಗತ್ತನ್ನು ಬೆರಗಿನಿಂದ ನೋಡುತ್ತಾ, ತನ್ಮಯತೆಯಿಂದ ಅನುಭವಿಸುತ್ತಾ, ಕುತೂಹಲ ತಳೆಯುತ್ತಾ, ಪ್ರತಿಕ್ರಿಯಿಸುತ್ತಾ ಹೋದಂತೆ ಪ್ರಕೃತಿಯ ಮೂಲದ್ರವ್ಯದಿಂದಲೇ ಕೃತಿಯೊಂದು ರಚನೆಯಾಗುತ್ತದೆ. ಅದರಂತೆ ಇಲ್ಲಿ ಪಂಚಮಿ ಕುಮಾರಿ ತನ್ನ ಸೊಗಸಾದ ಕವನ ಸಂಕಲನವನ್ನು ಬರೆದು ಸಹೃದಯರಿಗೆ ನೀಡಿದ್ದಾರೆ.

ಭಾವದ ಉತ್ಕಟ ಸ್ಥಿತಿಯಲ್ಲಿ ಕವಿತೆ ಸೃಷ್ಟಿಯಾಗುತ್ತದೆ. ಜಾತಸ್ವರೂಪದ ಪ್ರತಿಭೆ ಹಾಗೂ ವ್ಯತ್ಪತ್ತಿಯ ಬಲದಿಂದ ಕವಿತ್ವ ಸಿದ್ಧಿಸುತ್ತದೆ. ಸಂಕಲನದ ಶೀರ್ಷಿಕೆಯಾಗಿರುವ “ಆರಾಧನೆ' ಪುಸ್ತಕದ ಮೊದಲನೇ ಕವಿತೆಯೂ ಆಗಿದ್ದು ಅದೊಂದು ಚೆಲುವಾದ ಪ್ರಾರ್ಥನೆ, ಪ್ರಕೃತಿ ಪ್ರೀತಿ, ಬಂಡಾಯ, ಮಾನವೀಯತೆ, ಜೀವಪರ ಕಾಳಜಿ, ದೇಶಪ್ರೇಮ, ವಾಂಛೆ, ಕಷ್ಟ-ಸುಖ, ಜೀವನದೃಷ್ಟಿ ಮತ್ತು ಸಂಬಂಧಗಳು-ಇವೆಲ್ಲವನ್ನೂ ಬಿಂಬಿಸುವ ಕವನಗಳು ಪುಸ್ತಕದಲ್ಲಿವೆ. ಇವು ಸರಳ ಮತ್ತು ಆಕರ್ಷಣೀಯವಾಗಿರುವುದರಿಂದ ಮಕ್ಕಳಿಗೆ ಅಚ್ಚುಮೆಚ್ಚಾಗುವಲ್ಲಿ ಮತ್ತು ಎಲ್ಲರನ್ನೂ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತವೆ. ಈ ಸಂಕಲನದ ಕವನಗಳು ವೈವಿಧ್ಯಪೂರ್ಣವಾಗಿದೆ. ಕವಿತೆಗಳು ಮಕ್ಕಳ ಮನಸ್ಸಿಗೆ ಕಚಗುಳಿಯಿಟ್ಟು, ಮುದವನ್ನು ತುಂಬುವಂತಿದೆ. ಹಾಗೆಯೇ ಪ್ರತಿಯೊಂದು ಪದ್ಯದಲ್ಲಿ ಒಳ್ಳೆಯ ಆಶಯವೂ, ಮೌಲ್ಯ ಪ್ರತಿಪಾದನೆಯೂ ಅಡಕವಾಗಿದೆ. ಇಲ್ಲಿರುವ 'ಆರಾಧನೆ', 'ಅಮ್ಮ', 'ತಬ್ಬಲಿ', 'ಸ್ನೇಹ', 'ಜೀವನ', 'ಎಚ್ಚರ', 'ಪ್ರಕೃತಿ', 'ತವರು ಮನೆ', 'ಸೃಷ್ಟಿ' ಮೊದಲಾದ ಪದ್ಯಗಳು ಗಂಭೀರವಾದ ಒಳನೋಟವನ್ನೂ ಹೊಂದಿರುವುದು ವಿಶೇಷ.

About the Author

ಪಂಚಮಿ ಕುಮಾರಿ ಬಾಕಿಲಪದವು
(02 August 2003)

ಪಂಚಮಿ ಕುಮಾರಿ ಬಾಕಿಲಪದವು ಶಾಲಾದಿನಗಳಿಂದಲೇ ಕವಿತೆ ಬರೆಯಲು ಶುರುಮಾಡಿದ ಬಹುಮುಖ ಪ್ರತಿಭೆ. ಪ್ರಥಮ ಪಿ.ಯು.ಸಿ ವ್ಯಾಸಂಗದ ವೇಳೆಯೇ 'ಆರಾಧನೆ' ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಪಂಚಮಿ ಕುಮಾರಿ, ಕಥಾ ರಚನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವಿತೆ, ಕಥೆರಚನೆಯಲ್ಲಿ ಒಲವಿರುವ ಪಂಚಮಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾರೆ. ...

READ MORE

Related Books