ನೀರ ಮೇಗಲ ಸಹಿ

Author : ಹಂದಲಗೆರೆ ಗಿರೀಶ್

Pages 100

₹ 80.00




Published by: ಉಪಾಸನ ಪ್ರಕಾಶನ
Phone: 080 23181799

Synopsys

ಇದು ಕಿರು ಪದ್ಯಗಳ ಸಂಕಲನ. ಹೈಕುಗಳನ್ನು ಮಾದರಿಯಾಗಿಟ್ಟುಕೊಂಡು ಬರೆದಿರುವ ಈ ಸಂಕಲದ ಪ್ರಧಾನಗುಣವೇ ಲವಲವಿಕೆ. 'ಮುಂಗಾರಿಗೆ ಹಾಡುತ್ತಿವೆ ಗರಿಕೆ ನೇಗಿಲ ಕೆತ್ತುತ್ತಿದ್ದಾನೆ' ನಾಲ್ಕು ಸಾಲುಗಳಲ್ಲಿ ಬದುಕನ್ನು ಕಟ್ಟಿಕೊಡುವ ಇಂತಹ ಹಲವು ಕವಿತೆಗಳು ಇಲ್ಲಿವೆ. 'ತೊಟ್ಟು ಕಳಚಿತು ಬಾನ ಕಿತ್ತಳ, ಜಗಕೆ ಕತ್ತಲೆ' “ಒಲವು ಭೂಮಿ ಮೇಗಲ ಎರಡನೆ ಗುರುತ್ವ' ಅನುಭಾವ ಗುಣಗಳುಳ್ಳ ಹಲವು ಕವಿತೆಗಳು ಇವೆ. ಭೂಮಿ, ಪ್ರಕೃತಿಯೇ ಇವು ಗಳ ಗುರುತ್ವ ಶಕ್ತಿ. ಶ್ರಮ ಬೆವರುಗಳ ಆಹ್ಲಾದಗಳನ್ನೂ ಕೆಲವು ಸಾಲುಗಳು ತನ್ನದಾಗಿಸಿ ಕೊಂಡಿವೆ. “ಮದ್ದೂಳಗೆ ಎರೆಹುಳು ನಾನು ಬಯಲು ನನ್ನ ಕೃಷಿ' ಎನ್ನುವ ಕವಿಯ ಸಾಲುಗಳ ಅಂತರಾಳ ಎರೆಹುಳದ ಸಾಮಾನ್ಯತೆ ಮತ್ತು ಅದು ಮಣ್ಣಿಗೆ ನೀಡುವ ಪೌಷ್ಟಿಕ ಗುಣ ಎರಡನ್ನೂ ತನ್ನದಾಗಿಸಿಕೊಂಡಿದೆ.

About the Author

ಹಂದಲಗೆರೆ ಗಿರೀಶ್

ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ  ಬದುಕು ಕಟ್ಟಿಕೊಂಡಿದ್ದಾರೆ.  ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು. ಸಧ್ಯ ಕೃಷಿಯಲ್ಲೂ ತೊಡಗಿರುವುದರಿಂದ ಬಿಡುವಿನ ಸಮಯವೆಲ್ಲಾ ಕೃಷಿಗೆ ಮೀಸಲಿಟ್ಟಿದ್ದಾರೆ. ' ನೇಗಿಲ ಗೆರೆ ' 'ನೀರಮೇಗಲ ಸಹಿ' ಎಂಬ ಎರಡು ಕವನ ಸಂಕಲನಗಳು ಮತ್ತು 'ಅರಿವೇ ಅಂಬೇಡ್ಕರ್ 'ಕೃತಿ ಸಂಪಾದನೆ ಮಾಡಿದ್ದಾರೆ. ಅವರ ಕವಿತೆ ...

READ MORE

Related Books