
ʻನೇಗಿಲ ಗೆರೆʼ ಕೃತಿಯು ಹಂದಲಗೆರೆ ಗಿರೀಶ್ ಅವರ ಕವನ ಸಂಕಲನವಾಗಿದೆ. ಕೃತಿ ಕುರಿತು ಡಾ. ಬರಗೂರು ರಾಮಚಂದ್ರಪ್ಪ ಅವರು ಹೀಗೆ ಹೇಳಿದ್ದಾರೆ; ಈ ಕವಿಗೆ ಬದುಕಿನ ಬಹುಮುಖತೆಯ ಬಗ್ಗೆ, ಭಾರತದ ಬಹುರೂಪತೆಯ ಬಗ್ಗೆ, ಸರಸ್ವತಿಯ ವೈವಿಧ್ಯತೆಯ ಬಗ್ಗೆ ಬದ್ಧತೆ ಹಾಗು ಧಾರ್ಮಿಕ ಮೂಲಭೂತವಾದದ ಬಗ್ಗೆ ವಿರೋಧವಿದೆ. ಮಾನವ ಕುಲಕ್ಕೆ ಕಂಟಕವಾಗುವ ಎಲ್ಲಾ ಅಂಶಗಳ ಬಗ್ಗೆ ಪ್ರತಿರೋಧವಿದೆ. ಈ ಎಲ್ಲಾ ಅಂಶಗಳನ್ನು ತಾತ್ವಿಕಗೊಳಿಸುವ ಪ್ರಯತ್ನವಿದೆ. ಬಂಡಾಯ ಸಾಹಿತ್ಯ ಚಳುವಳಿಯ ಪ್ರಭಾವ ಜೀವಂತವಾಗಿದೆ ಎಂಬುವುದಕ್ಕೆ ಈ ಸಂಕಲನ ಸಾಕ್ಷಿಯಾಗಿದೆ," ಎಂದಿದ್ದಾರೆ

ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು. ಸಧ್ಯ ಕೃಷಿಯಲ್ಲೂ ತೊಡಗಿರುವುದರಿಂದ ಬಿಡುವಿನ ಸಮಯವೆಲ್ಲಾ ಕೃಷಿಗೆ ಮೀಸಲಿಟ್ಟಿದ್ದಾರೆ. ' ನೇಗಿಲ ಗೆರೆ ' 'ನೀರಮೇಗಲ ಸಹಿ' ಎಂಬ ಎರಡು ಕವನ ಸಂಕಲನಗಳು ಮತ್ತು 'ಅರಿವೇ ಅಂಬೇಡ್ಕರ್ 'ಕೃತಿ ಸಂಪಾದನೆ ಮಾಡಿದ್ದಾರೆ. ಅವರ ಕವಿತೆ ...
READ MORE