ಬಾ ಭವಿಷ್ಯದ ನಕ್ಷತ್ರಗಳಾಗೋಣ....

Author : ತೇಜಾವತಿ ಹೆಚ್.ಡಿ.

Synopsys

ಲೇಖಕಿ ತೇಜಾವತಿ ಹೆಚ್.ಡಿ. ಅವರ ಕವಿತೆಗಳ ಸಂಕಲನ-ಬಾ ಭವಿಷ್ಯದ ನಕ್ಷತ್ರಗಳಾಗೋಣ. ಲೇಖಕಿ ಗೀತಾ ವಸಂತ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಕವಿತೆಗಳಲ್ಲಿ ಸ್ಮೃತಿ, ಎಚ್ಚರ ಹಾಗೂ ಇದನ್ನೂ ಮೀರಿದ ಇನ್ನೇನನ್ನೋ ಹಿಡಿಯುವ ಸನ್ನಾಹದಲ್ಲಿ ಬೆರಗು ಮೂಡಿಸುತ್ತವೆ. ಚಲಿಸುವ ಕಾಲದ ಬಿಂಬಗಳನ್ನು ರೂಪಕಗಳಲ್ಲಿ ಸೆರೆ ಹಿಡಿಯಲು ಕವಿಗಳು ಹವಣಿಸುತ್ತಾರೆ. ಬದುಕಿನ ಎಲ್ಲ ಬರ್ಬರಗಳಿಗೆ ಕಿವಿಯಾಗುತ್ತಲೇ ದಿವ್ಯವಾದುದ್ದೊಂದು ತೋರುತ್ತಾರೆ. ತೇಜಾವತಿ ಅವರ ಕಾವ್ಯ ಜೀವಂತವಾಗಿರುವುದೇ ಅವರ ಚಲಿಸುವ ಚೈತನ್ಯದಿಂದ ಹಾಗೂ ಸದಾ ಹಿಗ್ಗುವ ಹಂಬಲದಿಂದ’ ಎಂದು ಪ್ರಶಂಸಿಸಿದ್ದಾರೆ. ಸಾಹಿತಿ ಕಮಲಾಕರ ಕಡವೆ ಅವರು ‘ದೂರದ ಬೆಳಕೊಂದು ಅರಸಿ ಹೊರಟಂತಿದೆ ಮಾತ್ರವಲ್ಲ; ಕವಿಗಳು ನಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದಾರೆ ಎಂದು ಅನಿಸುತ್ತದೆ. ಪುಟಪುಟದಲ್ಲಿಯೂ ಉದುರಿದ ಕಂಬನಿಗಳಿಂದ ಗಿಡ ಚಿಗುರಿಸುವ ; ಆಶಯ ಹೊತ್ತು ಕೃತಿ ನಮ್ಮಲ್ಲಿ ಧನಾತ್ಮಕ ದೃಷ್ಟಿಕೋನದ ಬೆಳಕು ಚೆಲ್ಲುತ್ತದೆ’ ಎಂದು ಶ್ಲಾಘಿಸಿದ್ದಾರೆ.

About the Author

ತೇಜಾವತಿ ಹೆಚ್.ಡಿ.

ಕವಯತ್ರಿ, ಕಥೆಗಾರ್ತಿ ತೇಜಾವತಿ ಹೆಚ್. ಡಿ. ಅವರು ವೃತ್ತಿಯಿಂದ ಕನ್ನಡ ಶಿಕ್ಷಕಿ. ಮೂಲತಃ ತುಮಕೂರಿನವರು. ಕಾವ್ಯ,ಕತೆ,ಲೇಖನ, ಕಾದಂಬರಿ ಮತ್ತು ಪ್ರಬಂಧ ಕ್ಷೇತ್ರ ಅವರ ಆಸಕ್ತಿಯ ಕ್ಷೇತ್ರಗಳು. ಕಾಲಚಕ್ರ - ಹೊನ್ನುಡಿ ಸಂಕಲನ ಹಾಗೂ ಮಿನುಗುವ ತಾರೆ - ಕವನ ಸಂಕಲನ ಪ್ರಕಟಣೆ ಕಂಡಿದೆ. ಅವರ ಹಲವಾರು ಬರಹಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಉತ್ತಮ ಶಿಕ್ಷಕ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಕರುನಾಡ ಚೇತನ ಪ್ರಶಸ್ತಿ’ದೊರೆತಿವೆ. ...

READ MORE

Related Books