ಖಾಕಿಯೊಳಗಿನ ಕಾವ್ಯ ಜಗತ್ತು

Author : ಶಿವಕುಮಾರ ದಂಡಿನ

Pages 112

₹ 120.00
Year of Publication: 2023
Published by: ದಂಡಿನ ರಾಜಪ್ಪ ಪರಿವಾರ ಪ್ರತಿಷ್ಟಾನ
Address: ಶಾರದಾ ದೇವಿ ನಗರ, ಮೈಸೂರು-570009
Phone: 9845282468

Synopsys

'ಖಾಕಿಯೊಳಗಿನ ಕಾವ್ಯ ಜಗತ್ತು’ ಶಿವಕುಮಾರದಂಡಿನ, ಮಹಾದೇವ ಪಾಟೀಲ ಅವರ ಸಂಪಾದಿತ ಕೃತಿಯಾಗಿದೆ. ಈ ಸಂಕಲನದಲ್ಲಿ ಇಪ್ಪತ್ತೊಂದು ಕವಿಗಳಿದ್ದು, ಅವರ ತಲಾ ಮೂರು ಕವಿತೆಗಳಿವೆ. ಇಲ್ಲಿ ಸುತ್ತಲಿನ ಬದುಕು, ಹಕ್ಕಿಗಳು, ಮಹಿಳಾ ಸಂವೇದನೆ, ನೆನಪು, ಅಪ್ಪ, ಅವ್ವ, ಪರಿಸರ, ಅಕ್ಷರದ ಅರಿವು, ನಿತ್ಯದ ಸಂಕಟ, ತಳಮಳಗಳ ವೈವಿಧ್ಯಮಯ ವಸ್ತುಗಳನ್ನು ಒಳಗೊಂಡ ಕವಿತೆಗಳಿವೆ. ಹೊಸ ತಲೆಮಾರಿನ ಕವಿಗಳ ಎದೆಯಾಳದ ಬೆಚ್ಚನೆಯ ಪ್ರೀತಿ, ಹೊಯ್ದಾಟ, ತುಯ್ದಾಟ, ಹೊಸ ಬದುಕಿನ ಹುಡುಕಾಟ, ಕರುಳಬಳ್ಳಿಯ ಸಂಬಂಧ ಇಲ್ಲಿ ಹಾಸು ಹೊಕ್ಕಾಗಿದೆ. ಇವುಗಳೊಂದಿಗೆ ಬಹಳ ಮುಖ್ಯವಾಗಿ ಪೊಲೀಸರ ಕರ್ತವ್ಯ ನಿಷ್ಠೆ, ಸಾಮಾಜಿಕ ಸೇವೆ, ಮಾನವೀಯ ಕಾಳಜಿ, ದೇಶಾಭಿಮಾನ, ಪ್ರಾಮಾಣಿಕತೆ, ನ್ಯಾಯಪರ ಧೋರಣೆಯ ಕವಿತೆಗಳಿರುವುದು ಸಂಕಲನದ ಹೆಚ್ಚುಗಾರಿಕೆ.

About the Author

ಶಿವಕುಮಾರ ದಂಡಿನ

ಶಿವಕುಮಾರ ದಂಡಿನ ಅವರು ವೃತ್ತಿಯಲ್ಲಿ ಪೊಲೀಸ್‌ ಅಧಿಕಾರಿ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕವನ ಸಂಕಲನಗಳು: ಮೋಹದ ಪಥವೂ ಇಹಲೋಕದ ರಿಣವೂ, ಖಾಕಿಯೊಳಗಿನ ಕನಸುಗಳು. ...

READ MORE

Related Books